ರಾಯಚೂರು: ಸುಡುಬಿಸಿಲಿಗೆ ಹೈರಾಣಾದ ಜನರಿಗೆ ರಾಜಸ್ಥಾನಿ ಅಸೋಷಿಯೇಷನ್ ಹಾಗೂ ಗೆಳೆಯರ ಬಳಗವೊಂದು ಮಜ್ಜಿಗೆ ಸೇವೆ ಮಾಡ್ತಿದೆ. ಬೆಳಗಾದ್ರೆ ಸಾಕು 44 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲಿನ ತಾಪ ಜನರನ್ನು ಹೈರಾಣಾಗಿಸಿದ್ದು, ಜನ ಹೊರಗೆ ಬರೋದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಅನಿವಾರ್ಯ ಕೆಲಸಗಳಿಗಾಗಿ ಹೊರಗೆ ಬರುವ ಜನರ ಹೊಟ್ಟೆ ತಣ್ಣಗೆ ಮಾಡುವ ಇವರ ಕಾರ್ಯ ಮೆಚ್ಚಿ ಇತರೆ ದಾನಿಗಳು ಸಹ ಮಜ್ಜಿಗೆ ಸೇವೆ ಮಾಡೋದಕ್ಕೆ ಮುಂದೆ ಬರ್ತಿದಾರೆ. ಪ್ರತಿ ದಿನ 700 ರಿಂದ 800 ಜನರ ಹೊಟ್ಟೆಯನ್ನ ಈ ಮಜ್ಜಿಗೆ ತಣ್ಣಗಾಗಿಸ್ತಿದೆ. ಬಿಸಿಲೂರಲ್ಲಿ ಇವರು ಮಾಡ್ತಿರೋ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.
PublicNext
26/04/2026 04:24 pm
LOADING...