ಬಳ್ಳಾರಿ: ಸಂಸತ್ ನಲ್ಲಿ ಶೇ 33 ಮಹಿಳಾ ಮೀಸಲಾತಿ ಬಿಲ್ 2023 ರಲ್ಲಿಯೇ ಸಂಸತ್ ನಲ್ಲಿ ಪಾಸ್ ಆಗಿದೆ. ನಂತರ ಅದನ್ನು ಜಾರಿಗೆ ತರದೇ ಈಗ ತರಾತುರಿಯಲ್ಲಿ ಕ್ಷೇತ್ರ ಮರುವಿಂಗಡಣೆ ಜೊತೆಗೆ ಈ ಬಿಲ್ ತಿದ್ದುಪಡಿಗೆ ತಂದಿದ್ದರಿಂದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ವಿರೋಧ ಮಾಡಿದೆ ಎಂದು ಸಂಡೂರು ಶಾಸಕಿ ಅನ್ನಪೂರ್ಣ ತುಕರಾಂ ಹೇಳಿದ್ದಾರೆ.
ಅವರು ಇಂದು ನಗರದಲ್ಲಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಜನಸಂಖ್ಯಾ ಆಧಾರದ ಮೇಲೆ ಮೀಸಲಾತಿ ತರುವ ಹುನ್ನಾರ ಬಿಜೆಪಿಯವರದ್ದಾಗಿತ್ತು. ಆದರೆ ಉತ್ತರ ಭಾರತದಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಿ, ದಕ್ಷಿಣ ಭಾರತದವರಿಗೆ ಅನ್ಯಾಯವಾಗುತ್ತಿತ್ತು ಅದಕ್ಕೆ ಮಹಿಳಾ ಮೀಸಲಾತಿ ಬಿಲ್ ನ್ನು ವಿರೋಧಿಸಿದೆ ಎಂದು ಸಮರ್ಥಿಸಿಕೊಂಡರು.
ಈ ಹಿಂದೆ 2014 ರಲ್ಲಿಯೇ ಅಧಿಕಾರಕ್ಕೆ ಬಂದ ಎನ್ ಡಿಎ ಕೂಟ ಈವರೆಗೆ ಯಾಕೆ ಮಹಿಳಾ ಮೀಸಲಾತಿಯನ್ನು ತರಲಿಲ್ಲ. ಹೀಗೆ ಯಾಕೆ ಏಕಾಏಕಿ ಮಹಿಳೆಯರ ಮೇಲೆ ಪ್ರೀತಿ ಹೆಚ್ಚಾಯ್ತು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷೆ ಮಂಜುಳಾ, ನಾಗಮಣಿ ಜಿಂಕಲ್ , ಆಶಾಲತಾ ಸೋಮಪ್ಪ, ರಾಜೇಶ್ವರಿ, ಕಮಲ ಮರಿಸ್ವಾಮಿ, ಮಂಜುಳ, ಶಮೀಮ್ ಜಕ್ಲಿ ಮೊದಲಾದವರು ಇದ್ದರು.
PublicNext
27/04/2026 03:41 pm
LOADING...