ಬಳ್ಳಾರಿ: ಮಹಿಳಾ ಮೀಸಲಾತಿ ತಿದ್ದುಪಡಿ ಕಾಯ್ದೆ ಜಾರಿಗೆ ಸಂಸತ್ ನಲ್ಲಿ ಎನ್ ಡಿಎ ವಿಫಲವಾಗಿರುವುದನ್ನು ಪ್ರತಿ ಪಕ್ಷಗಳು ಜಯ ಎಂಬಂತೆ ಬಿಂಬಿಸಿಕೊಳ್ಳುತ್ತಿವೆ. ಅವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಇಂದು ನಗರದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ. ಗಾಂಧಿ ಕುಟುಂಬಕ್ಕೆ ಮಹಿಳಾ ಮೀಸಲಾತಿ ಬೇಕಿಲ್ಲ. ಕಾರಣ ಅವರಿಗೆ ವಂಶಪರಂಪರೆಯ ರಾಜಕೀಯ ಇರುವುದರಿಂದ. ಇದೇ ರೀತಿ ಡಿಎಂಕೆ, ಸಮಾಜವಾದಿ ಪಕ್ಷ, ಟಿಎಂಸಿಯವರು ಸಹ ಮಹಿಳಾ ಮೀಸಲಾತಿ ವಿರೋಧಿಸಿದ್ದಾರೆ.
ಇಂಡಿ ಕೂಟ ಕುಟುಂಬದ ಕೂಟ ಆಗಿದೆಂದು ಆರೋಪಿಸಿದರು.ಈ ವೇಳೆ ಶ್ರೀರಾಮುಲು ಅವರು ತಮ್ಮ ಕಚೇರಿಯಲ್ಲಿ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಭಗೀರಥ ಜಯಂತಿ ಆಚರಿಸಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಪ್ರತಿ ಪಕ್ಷದ ನಾಯಕ,ಶ್ರೀನಿವಾಸ್ ಮೋತ್ಕರ್, ಸದಸ್ಯರಾದ ಕೆ. ಹನುಮಂತಪ್ಪ, ಹನುಮಂತ ಗುಡಿಗಂಟಿ, ಪಕ್ಷದ ಮುಖಂಡರುಗಳಾದ ಎಸ್.ಗುರುಲಿಂಗನಗೌಡ, ವೇಮಣ್ಣ, ಮೊದಲಾದವರು ಇದ್ದರು.
ಪ್ರಧಾನಿ ಮೋದಿ ಅವರನ್ನು ಮಲ್ಲಿಕಾರ್ಜುನ ಖರ್ಗೆ ಭಯೋತ್ಪಾದಕರು ಎಂದು ಕರೆದಿರುವುದು ದೇಶಕ್ಕೆ ಮಾಡಿದ ಅಪಮಾನವಾಗಿದೆ. ಒಂದು ಕುಟುಂಬವನ್ನು ಓಲೈಕೆ ಮಾಡಲು ಹೀಗೆ ಹೇಳಿದ್ದು ಸರಿಯಲ್ಲ. ಸಣ್ಣ ಖರ್ಗೆ ರೀತಿ ನಿಮ್ಮಂತಹ ಪ್ರಬುದ್ಧರು ಮಾತನಾಡಾಡುವುದು ಸರಿಯಲ್ಲ ಎಂದರು.
ನಿಜವಾದ ಭಯೋತ್ಪಾದಕರನ್ನು ಸನ್ಮಾನ ಮಾಡುತ್ತಾರೆ ಕಾಂಗ್ರೆಸ್ ನವರು ಇವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ಮೇ.9 ಚಿತ್ರದುರ್ಗದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಗೌರವಿಸುವ ಸಮಾವೇಶವನ್ನು ಪಕ್ಷ ಸಂಘಟನೆಗೆ ಒಗ್ಗಟ್ಟು ಪ್ರದರ್ಶಿಸಲು ಸಿದ್ಧತೆ ನಡೆಸಿದೆ. ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರಲಿದ್ದಾರೆ. ಹತ್ತು ಲಕ್ಷ ಸೇರುವ ಸಾಧ್ಯತೆ ಇದೆ ಎಂದರು.
PublicNext
23/04/2026 03:56 pm
LOADING...