ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕು ಕುಡಿತಿನಿ ಬಳಿ ಜಿಂದಾಲ್ ಗೆ ಕಡಿಮೆ ದರದಲ್ಲಿ ಕೊಟ್ಟ ಭೂಮಿ ವಾಪಸ್ ಕೊಡಬೇಕು ಅಂತ ಆಗ್ರಹಿಸಿ ರೈತರು, ರೈ ಸಂಘಟನೆಗಳು ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ಪ್ರತಿಭಟನಾ ನಿರತ ರೈತರನ್ನ ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ವಿರುದ್ಧ ಕುಡಿತಿನಿ ರೈತರ ಹೋರಾಟದ ಕಿಚ್ಚು ಹೆಚ್ಚಾಗಿದ್ದು ಧರಣಿ ನಡೆಸಲು ಹನ್ನೆರಡು ನೂರು ದಿನಗಳು ಕಳೆದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ರೈತರ ಹೋರಾಟ ಹತ್ತಿಕ್ಕಲು ಮುಂದಾಗಿದೆ ಅಂತ ಹೋರಾಟಗಾರರು ಆಕ್ರೋಶ ಹೊರಹಾಕಿದ್ರು.
ಪ್ರಜಾ ಪರಿವರ್ತನ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಕುಮಾರ್ ಮಾತಾಡಿ, ಕುರುಗೋಡು ಸಮೀಪದ ಕುಡಿತಿನಿ ಪಟ್ಟಣದಲ್ಲಿ ಕೆಐಎಡಿಬಿ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಜಿಂದಾಲ್ ಗೆ ಕಡಿಮೆ ದರದಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಕಳೆದ 3 ವರ್ಷದಿಂದ ರೈತರು ಸತ್ಯಗ್ರಹ ಮಾಡಿದ್ದಾರೆ. ಸರ್ಕಾರದಿಂದ ಇದುವರೆಗೂ ರೈತರಿಗೆ ಅನ್ಯಾಯ ಮಾಡಿದೆ. ಸಾವಿರಾರು ಎಕರೆ ಭೂಮಿ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದ ಇಷ್ಟು ವರ್ಷಗಳ ಕಾಲ ಯಾವುದೇ ಕಾರ್ಖಾನೆ ಸ್ಥಾಪನೆ ಮಾಡದೆ ಉದ್ಯೋಗ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ರೈತರ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪೊಲೀಸರನ್ನ ಛೂಬಿಟ್ಟು ರೈತರ ಹೋರಾಟ ಹತ್ತಿಕ್ಕಲು ಇಂಜೆಕ್ಷನ್ ಆರ್ಡರ್ ತಂದು ಪೊಲೀಸ್ ವಾಹನಗಳಲ್ಲಿ ರೈತರನ್ನು ತಂದು ಬಂಧಿಸುತ್ತಿರೋದು ಖಂಡನೀಯ ಅಂತೇಳಿದ್ರು
PublicNext
28/04/2026 04:22 pm
LOADING...