ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಬದಲಾವಣೆ - ಈಶ್ವರಪ್ಪ

ಬಳ್ಳಾರಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಒಂದು ಕಡೆ ಸೇರಿ ಸಭೆ ಮಾಡುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಗುಂಪು ಮಿತಿ‌ಮೀರಿ ಶಿಸ್ತು ಮೀರಿ ನಡೆದುಕೊಳ್ಳುತ್ತಿದ್ದಾರೆ. ಬರುವ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದ ರಾಜಕಾರಣ ಬಹಳಷ್ಟು ಬದಲಾವಣೆ ಆಗಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ

ನಗರದ ಅತಿಥಿ ಗೃಹದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಅನೇಕ ಮುಸ್ಲಿಂ ನಾಯಕರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಪಕ್ಷದಿಂದ ಹೊರ ಹಾಕಿದ್ದಾರೆ. ಅದಕ್ಕೆ ಮುಸ್ಲಿಂ ಗುರುಗಳು ಅದನ್ನು ವಿರೋಧಿಸಿ ಎಚ್ಚರಿಕೆ ನೀಡಿದ್ದಾರೆ. ಇದನ್ನು ಪಕ್ಷದ ಮುಖಂಡರಾರು ಖಂಡಿಸಿಲ್ಲ.

ಮುಸ್ಲಿಂರು ಯುಪಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೇರೆ ಪಕ್ಷ ಬೆಂಬಲಿಸಿದ್ದಾರೆ. ಈಗ ನಡೆದಿರುವ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಅವಸಾನದ ದಿಕ್ಕಿನಲ್ಲಿ ಸಾಗಲಿದೆಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಅವರು ದೇಶದ ಕ್ಷಮೆ ಕೇಳಬೇಕು ಎಂದ ಅವರು ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್ ವಿರೋಧ ಮಾಡಿದ್ದು ಮಹಿಳೆಯರಿಗೆ ಮಾಡಿದ ಅಪಮಾನ ಎಂದರು.

ಹಿಂದುತ್ವಕ್ಕೆ ಬಿಜೆಪಿಯಲ್ಲಿ ಬೆಲೆ ಇಲ್ಲ. ಜಾತಿ ರಾಜ ಕಾರಣಕ್ಕೆ ಬೆಲೆ ಇರುವ ಕಾರಣ ಶುದ್ಧೀಕರಣ ಆಗಲಿ ಎಂದ ಅವರು ಶುದ್ಧೀಕರಣ ಆಗುತ್ತೆ ಎಂಬ ನಂಬಿಕೆ ಇದೆಂದರು.

ಯಡಿಯೂರಪ್ಪ ಅವರಿಗೆ ಚಿತ್ರದುರ್ಗದಲ್ಲಿ ಸನ್ಮಾನ ಸಮಾವೇಶಕ್ಕೆ ಕರೆದರೆ ಸ್ನೇಹಿತರ ಜೊತೆ ಚರ್ಚಿಸಿ ತೀರ್ಮಾನಿಸುವೆ ಎಂದರು.

Edited By : Somashekar
PublicNext

PublicNext

23/04/2026 05:20 pm

Cinque Terre

10.93 K

Cinque Terre

0

ಸಂಬಂಧಿತ ಸುದ್ದಿ