ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಜೈಲಿನಲ್ಲಿದ್ದ ಆರೋಪಿ ಆಸ್ಪತ್ರೆಯಿಂದ ಪರಾರಿ

ಬಳ್ಳಾರಿ: ಜೈಲಿನಲ್ಲಿದ್ದ ಆರೋಪಿಯೊಬ್ಬನು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಿಂದ ಪರಾರಿಯಾದ ಘಟನೆ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹರಪನಹಳ್ಳಿ ಮೂಲದ ಅಣ್ಣಪ್ಪ ಎಂಬ ಆರೋಪಿ, ಜೈಲಿನೊಳಗಿದ್ದ ವೇಳೆ ಮಧ್ಯಾಹ್ನ ಮರದ ಮೇಲಿಂದ ಬಿದ್ದು ಗಾಯಗೊಂಡಿದ್ದನು. ತಕ್ಷಣವೇ ಅವರನ್ನು ಬಳ್ಳಾರಿ ನಗರದ ವಿಮ್ಸ್ (VIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆರೋಪಿ ಬಾತ್‌ರೂಮ್‌ಗೆ ಹೋಗಿದ್ದು, ಅಲ್ಲಿ ಕಿಟಕಿಯ ಗ್ಲಾಸ್ ಒಡೆದು ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನೆಯಿಂದ ಆಸ್ಪತ್ರೆ ಹಾಗೂ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

Edited By : Somashekar
PublicNext

PublicNext

24/04/2026 11:33 am

Cinque Terre

11.05 K

Cinque Terre

0

ಸಂಬಂಧಿತ ಸುದ್ದಿ