ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಎಸೆಸೆಲ್ಸಿಯಲ್ಲಿ ಸರಕಾರಿ ಶಾಲೆಯ ಸಾಧನೆ: ಗುರುಗಳ ಚರಣಕ್ಕೆ ಶಿರಬಾಗಿ ಗೌರವ ಸಲ್ಲಿಸಿದ ಶಾಸಕ ಗಂಟಿಹೊಳೆ !

ಬೈಂದೂರು: ಶಿರೂರು ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಚಮತ್ಕಾರ ನಡೆದಿದ್ದು, ಶೇ. 35ರಿಂದ ನೇರವಾಗಿ ಶೇ. 94 ಪರ್ಸೆಂಟ್ ಗೆ ಫಲಿತಾಂಶ ಜಿಗಿತಗೊಂಡಿದೆ.ಇದು ಶಾಲೆಯ ಪ್ರಾಂಶುಪಾಲೆ ಜಯಂತಿ ಟೀಚರ್ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಕೊಂಡಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಗುರುಗಳ ಚರಣಕ್ಕೆ ಶಿರಬಾಗಿ ಗೌರವ ಸಲ್ಲಿಸಿದ್ದು ಗಮನ ಸೆಳೆದಿದೆ. ಮಾತ್ರವಲ್ಲ , ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಆ ಟೀಕೆಗಳೇ ಇಂದಿನ ಯಶಸ್ಸಿಗೆ ಕಾರಣ ಎಂದು ಸಂತಸ ಹಂಚಿಕೊಂಡರು.

ವಿದ್ಯಾರ್ಥಿಗಳಿಗೆ ನೀಡಲಾದ ವಿಶೇಷ ತರಗತಿಗಳ ಫಲವಾಗಿ ಬಂದ ಸಾಧನೆ ಇದಾಗಿದ್ದು, ಶಿಕ್ಷಕರ ತಂಡದ ಸಮರ್ಪಣೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಿಗೂ ದೊಡ್ಡ ಸಾಧನೆ ಸಾಧ್ಯ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬೈಂದೂರು ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣ ಇದು ಎಂದು ಸ್ಥಳೀಯರು, ಟೀಚರ್ ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದರು.

Edited By :
Kshetra Samachara

Kshetra Samachara

28/04/2026 08:22 am

Cinque Terre

3.44 K

Cinque Terre

0

ಸಂಬಂಧಿತ ಸುದ್ದಿ