ಮಂಗಳೂರು: ಸೇಂಟ್ ಲೂರ್ಡ್ಸ್ ಇನ್‌ಸ್ಟಿಟ್ಯೂಶನ್ಸ್‌ನ ಮಾನಸಿಕ ಆರೋಗ್ಯ ಶುಶ್ರೂಷಾ ವಿಭಾಗ ‘ಡಿಜಿಟಲ್ ಯುಗದಲ್ಲಿ ಯುವ ಒತ್ತಡ ಮತ್ತು ಮಾನಸಿಕ ಆರೋಗ್ಯ’ ವಿಚಾರದ ಕುರಿತು ಸಂಸ್ಥಾ ಮಟ್ಟದ ಸಮ್ಮೇಳನ ಆಯೋಜಿಸಿದೆ.
ಸಮ್ಮೇಳನದಲ್ಲಿ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆ ಡಾ. ತೆರೇಸಾ ಮಥಿಯಾಸ್, ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಸಹ ಪ್ರಾಧ್ಯಾಪಕ ಜಯಪ್ರಕಾಶ್ ಸಿ.ಎಸ್.; ಮತ್ತು ಸೇಂಟ್ ಲೂರ್ಡ್ಸ್ ಇನ್ಸ್ಟಿಟ್ಯೂಶನ್ಸ್ ಹಾಗೂ ಇತರ ನರ್ಸಿಂಗ್ ಕಾಲೇಜುಗಳ ಬಾಹ್ಯ ಉಪನ್ಯಾಸಕಿ ಡಾ. ವೀಣಾ ಮನೋಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು:
ಮಂಗಳ ಕಾಲೇಜ್ ಆಫ್ ನರ್ಸಿಂಗ್‌ನ ನಿವೃತ್ತ ಪ್ರಾಂಶುಪಾಲೆ ಡಾ. ಮೇರಿ ಎಲಿಜಬೆತ್ ಸಮ್ಮೇಳನದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಜಿಎನ್ಎಂ ಮತ್ತು ತೃತೀಯ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಸಂಘಟಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ತೆರೇಸಾ ಮಥಿಯಾಸ್, ಡಾ. ವೀಣಾ ಮನೋಜ್, ವೀಕ್ಷಕಿ ಡಾ. ಮೇರಿ ಎಲಿಜಬೆತ್, ಎಸ್ಎನ್ಎ ಸಲಹೆಗಾರ್ತಿ ಪ್ರೇಮಾ ವೇಗಸ್ ಮತ್ತು ಸಂಘಟಕಿ ಜಾಸ್ಮಿನ್ ಲಿಡಿಯಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಈ ಸಮ್ಮೇಳನದಲ್ಲಿ 92 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಯುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಕಾಳಜಿಗಳನ್ನು ವಿವಿಧ ಅವಧಿಗಳು ಎತ್ತಿ ಹಿಡಿಯಿತು.
Kshetra Samachara
05/05/2026 09:44 pm
LOADING...