ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: SSLC ಪರೀಕ್ಷಾ ಮಂಡಳಿಯ ತಪ್ಪಿಗೆ ವಿದ್ಯಾರ್ಥಿನಿಗೆ 50 ಅಂಕ ಕಡಿತ!

ಉಪ್ಪುಂದ: SSLC ಪರೀಕ್ಷಾ ಮಂಡಳಿಯ ತಪ್ಪಿನಿಂದಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಬರೋಬ್ಬರಿ 50 ಅಂಕ ಕಡಿಮೆ ಬಂದಿದ್ದು ಬೆಳಕಿಗೆ ಬಂದಿದೆ.

ಉಪ್ಪುಂದ ಸರಕಾರಿ ಪ.ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಮೀಕ್ಷಾ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು, ಕನ್ನಡ-122, ಇಂಗ್ಲಿಷ್-95, ಗಣಿತ-84, ವಿಜ್ಞಾನ-84, ಸಮಾಜ-98 ಹಾಗೂ ಹಿಂದಿ-44 ಅಂಕಗಳು ಸಿಕ್ಕಿದ್ದವು.ಹಿಂದಿ ವಿಷಯದಲ್ಲಿನ 44 ಅಂಕಗಳನ್ನು ಕಂಡು ವಿದ್ಯಾರ್ಥಿನಿ ಮನಸ್ಸಿಗೆ ತೀವ್ರ ಆಘಾತ ಉಂಟು ಮಾಡಿತ್ತು. ಎಲ್ಲ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳು ಬಂದಿದ್ದು, ಹಿಂದಿಯಲ್ಲಿ ಇಷ್ಟೇಕೆ ಕಡಿಮೆ ಎಂಬುದು ಹೆತ್ತವರ ಪ್ರಶ್ನೆಯಾಗಿತ್ತು.

ಈ ಬಗ್ಗೆ ಶಿಕ್ಷಕರಲ್ಲಿ ವಿಚಾರಿಸಿದಾಗ ಉತ್ತರ ಪತ್ರಿಕೆಯ ಪ್ರತಿಗಳನ್ನು ತರಿಸಲು ಸೂಚಿಸಿದರು. ಅದರಂತೆ ಪ್ರತಿಗಳನ್ನು ತರಿಸಿ ಪರಿಶೀಲಿಸಿದಾಗ ಹಿಂದಿಯ ಒಟ್ಟು ಅಂಕಗಳು 94 ಎಂದಿತ್ತು. ಆದರೆ ಅಂಕಪಟ್ಟಿಯಲ್ಲಿ 94 ರ ಬದಲು 44 ಎಂದು ನಮೂದಿಸಿದ್ದು ಈ ಸಮಸ್ಯೆಗೆ ಕಾರಣವಾಗಿತ್ತು. ಈಗ ಮಂಡಳಿ ತನ್ನ ತಪ್ಪನ್ನು ಸರಿಪಡಿಸಿದ್ದು, ವಿದ್ಯಾರ್ಥಿನಿ ಸಮೀಕ್ಷಾಳಿಗೆ ಹೋದ 50 ಅಂಕ ಬಂದಂತಾಗಿದೆ. ಇದೀಗ ಪೋಷಕರೂ ನಿಟ್ಟುಸಿರು ಬಿಟ್ಟಿದ್ದಾರೆ.

Edited By : Vijay Kumar
PublicNext

PublicNext

29/04/2026 12:48 pm

Cinque Terre

8.23 K

Cinque Terre

0

ಸಂಬಂಧಿತ ಸುದ್ದಿ