ಮೈಸೂರು: ವರುಣಾ ಕ್ಷೇತ್ರ ವ್ಯಾಪ್ತಿಯ ಮರಿಗೌಡನ ಹುಂಡಿ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾಕಿದ್ದರು . ಈ ವಿಚಾರ ಗ್ರಾಮಸ್ಥರು ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ MLC ಯತೀಂದ್ರ ಕ್ರಮದ ಭರವಸೆ ನೀಡಿದ್ದಾರೆ. ಮಹಾತ್ಮರ ಭಾವಚಿತ್ರಗಳಿಗೆ ಯಾರೇ ಅವಮಾನ ಮಾಡಿದರು ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಕ್ರಮ ವಹಿಸುವಂತೆ ಈಗಾಗಲೇ ಪೊಲೀಸರಿಗೆ ತಿಳಿಸಲಾಗಿದೆ. ಇಂತಹ ಕೃತ್ಯಗಳಿಂದ ಸಿಎಂ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವುದರ ಜೊತೆಗೆ ವರುಣಾ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಒಂದಷ್ಟು ಕೆಟ್ಟ ಶಕ್ತಿಗಳು ಕೆಲಸ ಮಾಡುತ್ತಿವೆ ಯಾರೇ ಆದರೂ ಕಾನೂನು ಕ್ರಮ ಆಗುತ್ತದೆ ಅಂತ ಗ್ರಾಮಸ್ಥರಿಗೆ ಯತೀಂದ್ರ ಅಭಯ ನೀಡಿದರು.
PublicNext
29/04/2026 07:27 am
LOADING...