ಮೈಸೂರು: ನಾನು ಈ ಮೊದಲೇ ಹೇಳಿದಂತೆ ಹೈಕಮಾಂಡ್ ಏನು ಹೇಳುತ್ತದೋ ಹಾಗೆ ನಡೆದುಕೊಳ್ಳುತ್ತೇನೆ. ನಮ್ಮ ಹೈಕಮಾಂಡ್ ಐದು ವರ್ಷಗಳ ಕಾಲ ಐ ಮೀನ್ ಮುಂದಿನ ಎರಡು ವರ್ಷಗಳೂ ನೀವೇ ಸಿಎಂ ಆಗಿ ಮುಂದುವರೆಯಿರಿ ಅಂತಾ ಹೇಳಿದರೆ ನಾನೇ ಮುಖ್ಯಮಂತ್ರಿಯಾಗಿರುವೆ.. ಹೀಗಂತ ಸಿಎಂ ಸಿದ್ದರಾಮಯ್ಯ ಅವರು ಪುನರ್ ಉಚ್ಚರಿಸಿದ್ದಾರೆ.
ಮೈಸೂರು ಏರ್ ಪೋರ್ಟ್ ನಲ್ಲಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ವೆಂಕಟೇಶ್ ಮತ್ತು ಸ್ಥಳೀಯ ಶಾಸಕರು ಉಪಸ್ಥಿತರಿದ್ದರು.
PublicNext
06/05/2026 02:44 pm
LOADING...