ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಪ್ರಸಿದ್ಧ ಛಾಯಾಗ್ರಾಹಕ ಫೋಕಸ್ ರಾಘು ಆಯ್ಕೆ

ಉಡುಪಿ: ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಉಡುಪಿಯ ಪ್ರಸಿದ್ಧ ಛಾಯಾಗ್ರಾಹಕ ಫೋಕಸ್ ರಾಘು ( ರಾಘವೇಂದ್ರ ಕೊಡಂಗಳ) ಆಯ್ಕೆಯಾಗಿದ್ದಾರೆ.

ಉಡುಪಿಯ ಕೊಡಂಗಳ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಬೆಳೆದ ರಾಘವೇಂದ್ರ ಕೊಡಂಗಳ ಇಂದು ಫೋಕಸ್ ರಾಘು ಎಂಬ ಹೆಸರಿನಲ್ಲಿ ಪ್ರಸಿದ್ಧರು. ಛಾಯಾಗ್ರಹಣ ಕ್ಷೇತ್ರದಲ್ಲಿ ಮುನ್ನೂರಕ್ಕೂ ಹೆಚ್ಚು ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿ ಪಡೆದವರು. 25 ಕ್ಕೂ ಹೆಚ್ಚು ದೇಶಗಳ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಗಳಿಸಿ ಫ್ರಾನ್ಸ್ ದೇಶ ಕೊಡಮಾಡುವ EFIAP ಮತ್ತು ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ ಕೊಡಮಾಡುವ EFIP ಡಿಸ್ಟಿಂಕ್ಷನ್ ಗಳಿಸಿರುತ್ತಾರೆ. ಇದು ಹಳ್ಳಿ ಯುವಕನ ಜಾಗತಿಕ ಮಟ್ಟದ ಸಾಧನೆ.

ಮದುವೆ ಛಾಯಾಗ್ರಹಣದಲ್ಲಿ ವಿನೂತನ ಪ್ರಯೋಗಗಳೊಂದಿಗೆ ಸೈ ಎನ್ನಿಸುವ ಫೋಕಸ್ ರಾಘು ಅತ್ಯದ್ಭುತ ಪ್ರಿವೆಡ್ಡಿಂಗ್ ಫೋಟೋ ಶೂಟ್ಗಳ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ಅದರ ಜೊತೆಗೆ ತನ್ನ ಹವ್ಯಾಸವಾಗಿ ರೂಢಿಸಿಕೊಂಡ ಪ್ರವಾಸ, ಚಾರಣದಿಂದಾಗಿ ಅವರ ಫೋಟೋಗಳು ವಿಶ್ವವಿಖ್ಯಾತಿಗಳಿಸಿವೆ.

Edited By : Vijay Kumar
Kshetra Samachara

Kshetra Samachara

29/04/2026 10:57 am

Cinque Terre

5.35 K

Cinque Terre

0

ಸಂಬಂಧಿತ ಸುದ್ದಿ