ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವದ ಮೊಟ್ಟಮೊದಲ 'ಸ್ಪರ್ಮ್ ರೇಸಿಂಗ್ ವಿಶ್ವಕಪ್' ಸ್ಪರ್ಧೆಯನ್ನು ಘೋಷಿಸಲಾಗಿದೆ: ವಿಜೇತರಿಗೆ ಬರೋಬ್ಬರಿ 95 ಲಕ್ಷ ರೂಪಾಯಿ ನಗದು ಬಹುಮಾನ! ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಉದ್ಯಮಿಗಳಾದ ಎರಿಕ್ ಝು, ಗ್ಯಾರೆಟ್ ನಿಕೋನಿಯೆಂಕೊ, ನಿಕ್ ಸ್ಮಾಲ್ ಮತ್ತು ಶೇನ್ ಫ್ಯಾನ್ ಅವರು ಈ ವಿಶಿಷ್ಟ ಹಾಗೂ ವಿಜ್ಞಾನ ಆಧಾರಿತ ಸ್ಪರ್ಧಾತ್ಮಕ ಕ್ರೀಡೆಗೆ ಚಾಲನೆ ನೀಡಿದ್ದಾರೆ.
ಸ್ಪರ್ಧೆಯ ಸ್ವರೂಪ ಮತ್ತು ಬಹುಮಾನ
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಈ ರೋಮಾಂಚಕ ವಿಶ್ವಕಪ್‌ನಲ್ಲಿ, ವಿವಿಧ ದೇಶಗಳಿಂದ ಒಟ್ಟು 128 ವೀರ್ಯ ಮಾದರಿಗಳು ಭಾಗವಹಿಸಲಿವೆ. ಪ್ರತಿಯೊಂದು ಮಾದರಿಯೂ ಅಂತಿಮವಾಗಿ 100,000 ಡಾಲರ್ (ಸುಮಾರು 95 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಗೆಲ್ಲುವ ಗುರಿಯೊಂದಿಗೆ ಪೈಪೋಟಿ ನಡೆಸಲಿದೆ. ಈ ವಿನೂತನ ಸ್ಪರ್ಧೆಗೆ ಈಗಾಗಲೇ 10,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ವಿಶೇಷ.
PublicNext
29/04/2026 02:31 pm
LOADING...