ಎನ್.ಆರ್.ಪುರ : ಮುತ್ತಿನಕೊಪ್ಪ ಗ್ರಾಮದ ಶಂಕರಪುರದಲ್ಲಿ ಕಳ್ಳತನ ನಡೆದಿದೆ. ಸುಗಂಧಿ ಎಂಬುವವರ ಮಗಳು ರಕ್ಷಾ ಅವರು ಮದುವೆ ಕಾರ್ಯಕ್ರಮಕ್ಕಾಗಿ ಬ್ಯಾಂಕ್‌ನಿಂದ ಬಿಡಿಸಿಕೊಂಡು ಬಂದಿದ್ದ ಒಡವೆಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದ್ದು ಮಂಗಳವಾರ ಬೆಳಿಗ್ಗೆ 11:15 ಕ್ಕೆ ಸುಗಂಧಿ ಮತ್ತು ಅವರ ಮಗಳು ಒಡವೆಗಳನ್ನು ಮರಳಿ ಬ್ಯಾಂಕ್‌ಗೆ ಇಡಲು ಪೇಟೆಗೆ ಹೋಗಿದ್ದರು. ಮಧ್ಯಾಹ್ನ 1:15 ಕ್ಕೆ ಮನೆಗೆ ಮರಳಿದಾಗ ಮುಂಭಾಗಿಲ ಬೀಗ ಮುರಿದಿರುವುದು ಕಂಡುಬಂದಿದೆ.
ಒಳಗೆ ಪರಿಶೀಲಿಸಿದಾಗ ಕಳ್ಳರು ಬೆಡ್‌ರೂಮ್‌ನ ಗಾಡ್ರೇಜ್ ಬೀರುಗಳನ್ನು ಮುರಿದು 7 ಗ್ರಾಂ ತೂಕದ ಓಲೆ, 40 ಗ್ರಾಂ ತೂಕದ ತಾಳಿ ಸರ ಮತ್ತು 20 ಗ್ರಾಂ ತೂಕದ ಚೈನ್ ಸೇರಿದಂತೆ ಒಟ್ಟು 67 ಗ್ರಾಂ ಚಿನ್ನವನ್ನು ದೋಚಿದ್ದಾರೆ. ಸಾಕ್ಷ್ಯ ನಾಶಪಡಿಸಲು ಮನೆಯೊಳಗೆ ಕಾರದ ಪುಡಿ ಚಲ್ಲಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Kshetra Samachara
29/04/2026 06:12 pm
LOADING...