ಚಿಕ್ಕಮಗಳೂರು: ಊಟಕ್ಕೆ ಸಾಂಬಾರ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮದ್ಯದ ನಶೆಯಲ್ಲಿ ಆತನ ಸಹೋದರಿ ಮತ್ತು ಆಕೆಯ ಮಗಳ ಮೇಲೆ ಹಲ್ಲೆಗೆ ಯತ್ನಿಸಿ ರಸ್ತೆಯಲ್ಲಿ ರಾದ್ಧಾಂತ ಮಾಡಿರುವ ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗದಿಂದ ಕೂಲಿ ಕೆಲಸಕ್ಕಾಗಿ ವಲಸೆ ಬಂದು ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವಾಸವಿದ್ದ ಕುಟುಂಬದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ನಾಗರಾಜ್ ಎಂಬಾತ ಮನೆಗೆ ಬಂದಾಗ ಸಾಂಬಾರ್ ಸಿದ್ಧವಾಗಿಲ್ಲ ಎಂದು ಕುಪಿತಗೊಂಡು, ತನ್ನ ಅಕ್ಕ ಅಂಜಲಿ ಹಾಗೂ ಆಕೆಯ ಮಗಳು ಮೌಲ್ಯ ಮೇಲೆ ದೊಣ್ಣೆ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ.
ಮನೆಯಲ್ಲಿ ಆರಂಭವಾದ ಈ ಗಲಾಟೆ ಪಕ್ಕದಲ್ಲೇ ಇರುವ ರಾಷ್ಟ್ರೀಯ ಹೆದ್ದಾರಿವರೆಗೂ ಬಂದಿದೆ. ಸುಮಾರು ಅರ್ಧ ಗಂಟೆಯ ಕಾಲ ರಸ್ತೆ ಬದಿಯಲ್ಲಿ ನಾಗರಾಜ್ ದರ್ಪ ತೋರಿದ್ದಾನೆ. ಗಲಾಟೆ ಬಿಡಿಸಲು ಮುಂದಾದ ಸ್ಥಳೀಯರ ಮೇಲೂ ಆತ ಹಲ್ಲೆಗೆ ಯತ್ನಿಸಿದ್ದಾನೆ. ಈ ಹೈಡ್ರಾಮಾವನ್ನು ಕಂಡ ಸ್ಥಳೀಯರು ಕೂಡಲೇ ಆಲ್ದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಿದ್ದ ನಾಗರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.
PublicNext
28/04/2026 11:28 am
LOADING...