ಗುಂಡ್ಲುಪೇಟೆ : ಸರ್ಕಾರದಿಂದ ಸ್ವಚ್ಛಭಾರತ್ ಯೋಜನೆಯಡಿ ಲಕ್ಷಾಂತರ ರೂ ಖರ್ಚಾಗುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗದೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಸಹ ಸ್ವಚ್ಛತೆ ಮರೀಚಿಕೆಯಾಗಿ ಉಳಿದಿದೆ ಎಂಬುದಕ್ಕೆ ಕೂತನೂರು ಗ್ರಾಮಪಂಚಾಯತಿಗೆ ಸೇರಿದ ಮಲ್ಲಯ್ಯನಪುರ ಗ್ರಾಮವೇ ನಿದರ್ಶನವಾಗಿದೆ.ಗುಂಡ್ಲುಪೇಟೆ ತಾಲೂಕು ಮಲ್ಲಯ್ಯನಪುರ ಗ್ರಾಮದಲ್ಲಿ ಹಿಂದಿನಿಂದಲೂ ಸಹ ಮೂಲ ಸೌಕರ್ಯ ಕೊರತೆಯಿದೆ. ಎಲ್ಲೆಂದರಲ್ಲಿ ಕಸದ ರಾಶಿ ಚರಂಡಿಗಳಲ್ಲಿ ತುಂಬಿದ ಕೊಳಚೆ ನೀರು, ರಸ್ತೆಯುದ್ದಕ್ಕೂ ಅಶುಚಿತ್ವ ವಾತಾವರಣದೊಟ್ಟಿಗೆ ಜನರು ಜೀವನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಕೂತನೂರು ಗ್ರಾಮಪಂಚಾಯತಿ ಆಡಳಿತ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ, ಸ್ವಚ್ಛಭಾರತ್ ಮಿಷನ್ ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಹಳ್ಳಹಿಡಿದಿದೆ , ಸ್ವಾತಂತ್ರ್ಯ ಬಂದು 75 ವರ್ಷಗಳೆ ಕಳೆದರೂ ಸಹ ಮೂಲಸೌಕರ್ಯಕ್ಕಾಗಿ ಪರದಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ, ಕೂಡಲೇ ಗ್ರಾಮಪಂಚಾಯತಿ ಆಡಳಿತ ಮಂಡಳಿ ಸ್ವಚ್ಛತಾ ಕಾರ್ಯಾಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ದೊಟ್ಟಮಟ್ಟದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತ ಮುಖಂಡ ನಾಗಪ್ಪ ಎಚ್ಚರಿಸಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ.
PublicNext
28/04/2026 03:25 pm
LOADING...