ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪ: ರಸ್ತೆಗೆ ಅಡ್ಡ ಬಂದ ದನ - ನಿಯಂತ್ರಣ ತಪ್ಪಿದ ಬೈಕ್ ಸವಾರ ಸಾವು

ಕೊಪ್ಪ: ಅತಿ ವೇಗ ಮತ್ತು ಹೆಲ್ಮೆಟ್ ಧರಿಸದ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಕೊಪ್ಪದ ಕುಂಬ್ರಿಹುಬ್ಬು ಬಳಿ ನಡೆದಿದೆ. ಮೃತ ಕಿರಣ್ ಎಂ.ಸಿ (30) ಅವರು ತಮ್ಮ ಪತ್ನಿ ಲಕ್ಷ್ಮಿ ಅವರೊಂದಿಗೆ ಸೋಮವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಚಗಲ್ ರಸ್ತೆಯ ಗ್ಯಾಸ್ ಗೋಡೌನ್ ದಾಟಿದ ಬಳಿಕ ದನವೊಂದು ಅಡ್ಡ ಬಂದಿದೆ. ದನವನ್ನು ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಹೆಲ್ಮೆಟ್ ಧರಿಸದ ಕಾರಣ ಕಿರಣ್ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣ ಅವರನ್ನು ಕೊಪ್ಪದ ಸರ್ಕಾರಿ ಆಸ್ಪತ್ರೆಗೆ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ. ಪತ್ನಿ ಲಕ್ಷ್ಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Edited By : PublicNext Desk
Kshetra Samachara

Kshetra Samachara

29/04/2026 06:25 pm

Cinque Terre

580

Cinque Terre

0

ಸಂಬಂಧಿತ ಸುದ್ದಿ