ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಪಲ್ಟಿ, ಹಲವು ವಾಹನಗಳಿಗೆ ಹಾನಿ

ಕೊಪ್ಪ: ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನವೊಂದು ರಸ್ತೆಯ ಬದಿಯಲ್ಲಿದ್ದ ಅಂಗಡಿ ಹಾಗೂ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಕೊಪ್ಪ ಬಸ್ ನಿಲ್ದಾಣದ ಸಮೀಪ ಬುಧವಾರ ತಡರಾತ್ರಿ ಸಂಭವಿಸಿದ್ದು ವೇಗವಾಗಿ ಬಂದ ಪಿಕಪ್ ವಾಹನವು ಮೊದಲು ನಿಲ್ಲಿಸಲಾಗಿದ್ದ ಎರಡು ಬೈಕ್‌ಗಳಿಗೆ ಗುದ್ದಿದ್ದು ಇದರಿಂದ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.

ಅಷ್ಟಕ್ಕೇ ನಿಲ್ಲದ ವಾಹನವು ಪಕ್ಕದಲ್ಲಿದ್ದ ಅಂಗಡಿಯ ಮುಂಭಾಗಕ್ಕೂ ನುಗ್ಗಿದ್ದು, ಅಂಗಡಿಯ ಮುಂಭಾಗದ ಭಾಗವು ನಜ್ಜುಗುಜ್ಜಾಗಿದೆ. ಘಟನೆಯ ತೀವ್ರತೆಗೆ ಪಿಕಪ್ ವಾಹನವು ರಸ್ತೆಯಲ್ಲೇ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

30/04/2026 01:51 pm

Cinque Terre

4.45 K

Cinque Terre

0

ಸಂಬಂಧಿತ ಸುದ್ದಿ