ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಮ ಕಾರ್ಯದಲ್ಲಿ ಭಾಗಿಯಾದ ಸಚಿವ ದಿನೇಶ್ ಗುಂಡೂರಾವ್!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಗಾಂಧಿನಗರ ಶಾಸಕರೂ ಆದ ದಿನೇಶ್ ಗುಂಡೂರಾವ್ ಅವರು ಇಂದು ಹೋಮ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಕ್ಷೇತ್ರದ ಜನರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ಅಂದಹಾಗೆ, ಶೇಷಾದ್ರಿಪುರಂನ ಆರ್.ಕೆ.ಸ್ಟ್ರೀಟ್ ನ ಶಿರೂರು ಪಾರ್ಕ್ ರಸ್ತೆಯ ಬಳಿ ಇರುವ ಬಲಮುರಿ ಗಣೇಶ ದೇವಸ್ಥಾನದ ಕುಂಭಾಭಿಷೇಕ ಮತ್ತು ಲೀಲಾಕ್ಸ್ ಅಸೋಸಿಯೇಷನ್ ನ 55ನೇ ವರ್ಷದ ಶ್ರೀ ಅಣ್ಣಮ್ಮದೇವು ಮಹೋತ್ಸವ ಹಿನ್ನೆಲೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಪೂರ್ಣಾಹುತಿ ಕೈಂಕರ್ಯವನ್ನು ಪೂರ್ಣಗೊಳಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

Edited By :
PublicNext

PublicNext

30/04/2026 07:35 am

Cinque Terre

9.41 K

Cinque Terre

0