ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಕರ್ತವ್ಯ ನಿರತ ಸಿಬ್ಬಂದಿ ಹೃದಯಘಾತಕ್ಕೆ ಬಲಿ

ಹಡಗಲಿ : ಹೂವಿನ ಹಡಗಲಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೆಕ್ಕಪತ್ರಾಧಿಕಾರಿ ವಿಜಯಕುಮಾರ್ (40) ಕಚೇರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಿಜಯಕುಮಾರ್ ಎಂದಿನಂತೆ ಬುಧವಾರ ಬೆಳಗ್ಗೆ ಕಚೇರಿಗೆ ಆಗಮಿಸಿ ಕಚೇರಿಯ ಇತರ ಅಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ತಮ್ಮ ಕೋಣೆಗೆ ತೆರಳಿದ ಕರ್ತವ್ಯನಿರ್ವಹಿಸುವ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿ ಕುರ್ಚಿಯ ಮೇಲೆಯೇ ಮಲಗಿದ್ದಾರೆ. ಇದನ್ನು ಗಮನಿಸಿದ ಕಚೇರಿಯ ಇತರ ಸಿಬ್ಬಂದಿ ವಿಜಯಕುಮಾರ್ ಅವರನ್ನು ಮಾತನಾಡಿಸಿದರೂ ಮಾತನಾಡದ ಕಾರಣ ಪಟ್ಟಣದ ಖಾಸಗಿ ಆಸ್ಪತೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವಿಜಯಕುಮಾರ್ ಮೃತಪಟ್ಟಿದ್ದರು.

Edited By : Abhishek Kamoji
Kshetra Samachara

Kshetra Samachara

30/04/2026 11:49 am

Cinque Terre

1.34 K

Cinque Terre

0