ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಾಯಿ ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಎಸಿ ಇಲ್ಲದೇ ಬಿಸಿಲಿನ ಧಗೆಗೆ ಬಾಣಂತಿಯರು ಪರದಾಡುವ ದುಸ್ಥಿತಿ ಎದುರಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ 500 ರಿಂದ 700ಕ್ಕೂ ಅಧಿಕ ಹೆರಿಗೆ ಮಾಡಿಸಲಾಗುತ್ತದೆ. ಆದ್ರೆ ಹೆರಿಗೆ ಆದ ಬಳಿಕ ವಾರ್ಡ್ ನಲ್ಲಿ ಶಿಫ್ಟ್ ಮಾಡಿದ ಬಳಿಕ ಕನಿಷ್ಠ ಎಸಿ, ಫ್ಯಾನ್ ಆಗದೇ ಶೆಕೆಗೆ ಒದ್ದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದು ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ.
ಕಳೆದ ಮಾರ್ಚ್ ತಿಂಗಳಲ್ಲೇ ಹೆರಿಗೆ ವಾರ್ಡ್ ನಲ್ಲಿ ಎಸಿ, ಫ್ಯಾನ್ ಸಮಸ್ಯೆ ಉಂಟಾಗಿದೆ. ಅಲ್ಲಿಂದ ಇಂದಿನವರೆಗೆ ಬಾಣಂತಿಯರು ಗಾಳಿ, ಎಸಿ ಇಲ್ಲದೇ ಒದ್ದಾಡಿದ್ದಾರೆ. ಇದ್ರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸೋ ಮಕ್ಕಳಿಗೆ ಎಸಿ ಸೌಲಭ್ಯ ಕಲ್ಪಿಸಿದ ಯೋಜನೆಗೆ ತಿಲಾಂಜಲಿ ಇಟ್ಟಂತಾಗಿದೆ.
ಹೊಸಪೇಟೆಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಿತಿ ಅದೋಗತಿ ತಲುಪಿದ್ದು, ಹೆರಿಗೆ ವಾರ್ಡ್ ನಲ್ಲಿ ಬೇಸಿಗೆಯ ಬೇಗೆಗೆ ನವಜಾತ ಶಿಶುಗಳು, ಬಾಣಂತಿಯರು ಹೈರಾಣ ಆಗಿದ್ದಾರೆ. ಲಕ್ಷ, ಲಕ್ಷ ಹಣ ಖರ್ಚು ಮಾಡಿ ಹಾಕಿಸಿದ ಎಸಿಗಳು ಕೆಲಸ ಮಾಡದೇ ಇರೋದ್ರಿಂದ ಇರೋ ಫ್ಯಾನ್ ಗಳು ಅಲ್ಪ, ಸ್ವಲ್ಪ ತಿರುಗ್ತಿವೆ, ಇನ್ನುಳಿದಿದ್ದು ನಿಂತಲ್ಲೇ ನಿಂತಿವೆ. ಇದ್ರಿಂದ ಅತ್ತ ಎಸಿನೂ ಇಲ್ಲ, ಫ್ಯಾನ್ ಕೂಡಾ ಆನ್ ಆಗದೇ ಇರೋದ್ರಿಂದ ಹೆರಿಗೆಗೆ ಬರೋ ಜನರು ಮನೆಯಿಂದ ಫ್ಯಾನ್ ತಂದು ಹಚ್ಚಿಕೊಳ್ಳುತ್ತಿದ್ದಾರೆ. ಸರ್ಕಾರ ಬೇರೆ, ಬೇರೆ ಅನುದಾನದಲ್ಲಿ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್ ಗೆ ಲಕ್ಷಾಂತರ ಖರ್ಚು ಮಾಡಿ ಎಸಿಗಳನ್ನು ಹಾಕಿಸಲಾಗಿತ್ತು. ಅಂದು ಹಾಕಿದ ಎಸಿ, ಹಾಳಾಗಿವೆ. ಇದಕ್ಕೆ ಆಕ್ರೋಶ ಹೊರಪಡಿಸಿರೋ ಬಾಣಂತಿಯರು ಪೋಷಕರು ಕೂಡಲೇ ಸರಿಪಡಿಸಿ ಅಂತ ಆಗ್ರಹಿಸಿದ್ರು.
PublicNext
02/05/2026 03:42 pm
LOADING...