ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ತಾಪಮಾನ ಏರಿಕೆ ಆಗ್ತಾಯಿದೆ. ಇದರಿಂದ ಜಿಲ್ಲೆಯ ಸರ್ಕಾರಿ ಪ್ರತಿಯೊಂದು ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ಕೇಂದ್ರ ಓಪನ್ ಮಾಡಲಾಗಿದೆ. ಸನ್ ಸ್ಟ್ರೋಕ್‌ಗೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ವಿಜಯನಗರ ಜಿಲ್ಲಾದ್ಯಂತ 52 PHC ಕೇಂದ್ರಗಳಿವೆ. ಇದರಿಂದ PHC ಕೇಂದ್ರಗಳಿಗೆ ಒಂದರಂತೆ 77 ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ ಮಾಡಲಾಗಿದೆ.
ಸನ್ ಸ್ಟ್ರೋಕ್ ವಿಚಾರವಾಗಿ ಮಾತಾಡಿರೋ ವಿಜಯನಗರ ಡಿಎಚ್ಓ ವಿನಯ್ ಕುಮಾರ್, ಹೀಟ್ ಸ್ಟ್ರೋಕ್ ಗೆ ಒಳಗಾದವರಿಗೆ ತುರ್ತು ಚಿಕಿತ್ಸೆಯ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ORS ಪೌಡರ್, ಪಲ್ಸ್ ಪರೀಕ್ಷಾ ಯಂತ್ರದ ಮೂಲಕ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ತಾಪಮಾನ ಏರಿಕೆ ಆಗ್ತಿರೋದ್ರಿಂದ ಜನರ ದೇಹ ಡಿಹೈಡ್ರೆಷನ್ ಒಳಗಾಗದಂತೆ ಹೆಚ್ಚು ನೀರು ಕುಡಿಯಲು ಸೂಚನೆ ನೀಡಿದ್ದಾರೆ. ಕಾಟನ್ ಬಟ್ಟೆ ಹಗುರವಾದ ವಸ್ತ್ರ ಧರಿಸೋದು, ಹಸಿ ತರಕಾರಿ, ಜ್ಯೂಸ್, ಹಣ್ಣುಗಳ ಸೇವನೆ ಮೂಲಕ ದೇಹ ತಂಪಾಗಿರಿಸಿಕೊಳ್ಳಿ ಅಂತ ವಿಜಯನಗರ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ವಿನಯ್ ಹೇಳಿದರು.
PublicNext
25/04/2026 06:02 pm
LOADING...