ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಗೋ ಸಮ್ಮಾನ್ ಆಹ್ವಾನ್ ಅಭಿಯಾನ - ಗೋ ಹತ್ಯೆ ನಿಷೇಧ ಕಾನೂನು ಜಾರಿಗಾಗಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ

ಹೊಸಪೇಟೆ : ವ್ಯಾಪ್ತಿ ಗೋಮಾತೆಯ ರಕ್ಷಣೆ ಮತ್ತು ಗೋ ವಂಶದ ಸಂರಕ್ಷಣಾ ಅಭಿಯಾನದ ಭಾಗವಾಗಿ ಗೋ ಸಮ್ಮಾನ್ ಆಹ್ವಾನ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಗೋ ರಕ್ಷಣೆಯ ಅಭಿಯಾನ ಮಾಡೋ ಮೂಲಕ ಹಿಂದೂ ಪರ ಕಾರ್ಯಕರ್ತರು ನಗರದ ಸಾಯಿಬಾಬಾ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಕಾಲನಡಿಗೆ ಜಾಥಾ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಹಿಂದೂ ಕಾರ್ಯಕರ್ತರ ತೆರಳಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ಶತಮಾನಗಳಿಂದಲೂ ಗೋ ವಂಶವು ಭಾರತೀಯ ಪರಂಪರೆಯ ಜೀವನಾಡಿಯಾಗಿದೆ. ಆದರೆ ಸದ್ಯದ ಪರಿಸ್ಥಿತಿ ಗೋ ಗಳಿಗೆ ರಕ್ಷಣೆ ಮತ್ತು ಉತ್ತೇಜನ ಕೊರತೆಯಾಗಿದೆ. ಗೋ ವಂಶದ ಸ್ಥಿತಿ ನೋಡ್ತಿದ್ದರೆ ನಿಜಕ್ಕೂ ದುಃಖಕರವಾಗಿದೆ. ಪ್ರತಿ ಎರಡು ತಿಂಗಳೊಮ್ಮೆ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಾ ಇದ್ದಾವೆ. ಗೋ ರಕ್ಷಣೆ ವಿಚಾರವಾಗಿ ಮೆಮೊ ಕೊಡ್ತಾವೆ.

ಒಂದು ವರ್ಷ ಕಾಲಾವಕಾಶ ಕೊಡ್ತೆವೆ. ಸಾಧು ಸಂತರ ಸಮಯವನ್ನು ಪರೀಕ್ಷೆ ಮಾಡಬೇಡಿ. ಗೋ ಹತ್ಯೆ ಮಾಡೋದನ್ನ ಕೂಡಲೇ ನಿಷೇಧ ಮಾಡಬೇಕು. ಗೋ ಹತ್ಯೆಗೆ ಯಾರು ತಂದು ಕೊಡ್ತಾರೆ ಅವರ ಮೇಲೆ ಕ್ರಮ ತಗೊಳಬೇಕು. ಗೋವನ್ನು ರಾಷ್ಟ್ರ ಪ್ರಾಣಿ ಮಾಡಬೇಕೆಂದು ಹಿಂದೂ ಕಾರ್ಯಕರ್ತರು ಮನವಿ ಮಾಡಿದರು.

Edited By :
PublicNext

PublicNext

27/04/2026 05:54 pm

Cinque Terre

12.52 K

Cinque Terre

1

ಸಂಬಂಧಿತ ಸುದ್ದಿ