ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ರಾಜಾರೋಷವಾಗಿ ಖದೀಮರ ಓಡಾಟ - ಶ್ವಾನ ಬೊಗಳೋದನ್ನ ನೋಡಿ ಎಚ್ಚೆತ್ತ ಸಾರ್ವಜನಿಕರು

ಹಡಗಲಿ : ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮುಸುಕುಧಾರಿ ಕಳ್ಳರ ಗ್ಯಾಂಗ್ ಓಡಾಟ ನಡೆಸಿದೆ. ಖದೀಮರು ರಾತ್ರೋರಾತ್ರಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ನಿರ್ಭಯವಾಗಿ ತಿರುಗಾಟ ನಡೆಸಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಟ್ಟಣದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮುಸುಕುಧಾರಿ ಕಳ್ಳರ ಗ್ಯಾಂಗ್ ಓಡಾಟದ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ಈ ಘಟನೆಯಿಂದ ಪಟ್ಟಣದಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ನಾಯಿಗಳ ಬೊಗಳುವ ಶಬ್ದದಿಂದ ಸ್ಥಳೀಯರು ಎಚ್ಚೆತ್ತಿದ್ದಾರೆ.

ತಮ್ಮ ತಮ್ಮ ಮನೆಗಳ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕಳ್ಳರ ಓಡಾಟ ಪತ್ತೆ ಆಗಿದೆ. ಮೈ ತುಂಬಾ ಬಟ್ಟೆ, ಕೈ ಗವಸು, ತಲೆ ಮತ್ತು ಮುಖಕ್ಕೆ ಟೋಪಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು, ಮೂರು ಜನರು ಓಡಾಟ ನಡೆಸಿದ್ದಾರೆ. ಈ ವೇಳೆ ಶ್ವಾನಗಳು ಬೊಗಳುತ್ತಿರುವಾಗ ಮತ್ತೊಬ್ಬ ಮುಸುಕುಧಾರಿ ಕಲ್ಲಿನಿಂದ ಹೊಡೆದು ಓಡಿಸುವ ಪ್ರಯತ್ನ ಮಾಡಿದ್ದಾನೆ.

ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ನಮ್ಮ ರಕ್ಷಣೆ ನಾವೇ ಮಾಡ್ಕೋಬೇಕು, ಮುಸುಕುಧಾರಿ ಕಳ್ಳರು ಬಂದಾಗ ಕಾರದಪುಡಿ ಎರಚಬೇಕು. ಕಲ್ಲಿನಿಂದ ಹೊಡೆದು ಓಡಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತು ಹಡಗಲಿ ಪಟ್ಟಣದಲ್ಲಿ ಸಾರ್ವಜನಿಕರ ಸಭೆ ನಡೆಸಿ ಪೊಲೀಸರ ಜಾಗೃತಿ ಮೂಡಿಸಿದ್ದಾರೆ. ನಗರದಲ್ಲಿ ಮತ್ತಷ್ಟು ರಾತ್ರಿ ಗಸ್ತು ಹೆಚ್ಚಾಗಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

Edited By : Vinayak Patil
PublicNext

PublicNext

06/05/2026 02:03 pm

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ