ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸರಣಿ ಅಪಘಾತ ಆಗಿದೆ. ಲಾರಿ ಡ್ರೈವರ್ ಯದ್ವಾತದ್ವಾ ಚಾಲನೆ ಮಾಡಿದ್ರಿಂದ ಹನುಮನಹಳ್ಳಿ ಗ್ರಾಮದ ಬಳಿ ಬೈಕ್ ಗೆ ಗುದ್ದಿದ್ದಾನೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದ್ರಿಂದ ಹೆದರಿದ್ದ ಡ್ರೈವರ್ ಬಿಎಂಎಂ ಫ್ಯಾಕ್ಟರಿ ಬಳಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಲಾರಿ ಫಲ್ಟಿ ಆಗಿ ಕಾರು ಮೇಲೆ ಬಿದ್ದಿದೆ. ಇದ್ರಿಂದ ಮೂರಕ್ಕೂ ಅಧಿಕ ಜನ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಯಕನಕೆರೆ ಗ್ರಾಮದ ಬಳಿ ನಡೆದಿದೆ.
ಬೆಳ್ಳುಳ್ಳಿ ತುಂಬಿ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಯತ್ತ ಲಾರಿ ಸಾಗ್ತಾಯಿತ್ತು. ಈ ವೇಳೆ ಲಾರಿ ಚಾಲಕನಿಂದ ಸರಣಿ ಅಪಘಾತ ಆಗಿ ಮೂರಕ್ಕೂ ಅಧಿಕ ಜನ ಸಾವನ್ನಪ್ಪಿರೋ ಶಂಕೆ ಇದೆ. ಸ್ಪಾಟ್ ನಲ್ಲೇ ಮುಂದೆ ನಿಂತು ಗಾಯಾಳುಗಳನ್ನ ಆಸ್ಪತ್ರೆಗೆ ವಿಜಯನಗರ ಎಸ್ಪಿ ಎಸ್. ಜಾಹ್ನವಿ ರವಾನಿಸುತ್ತಿದ್ದಾರೆ. ಜೆಸಿಬಿ ಮೂಲಕ ಕೆಳಗೆ ಬಿದ್ದಿರೋ ಲಾರಿ ಮೇಲೆತ್ತುವ ಕಾರ್ಯ ನಡೀತಿದೆ. ಸ್ಥಳದಲ್ಲಿ ಲಾರಿ ತೆರವು ಕಾರ್ಯಾಚರಣೆ ನೋಡಲು ತಂಡೋಪ ತಂಡವಾಗಿ ಜನ ಜಮಾಯಿಸಿದ್ದಾರೆ. ನೆರೆದಿದ್ದ ಜನರನ್ನ ಚದುರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
19/04/2026 12:48 pm
LOADING...