ಹೊಸಪೇಟೆ: ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪೂಜಿಸಲಾಗುವ ಹಸು, ಎತ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಕಟಾವು ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಹೊಸಪೇಟೆ ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹೊಸಪೇಟೆಯ ಚಿತ್ತವಾಡ್ಗಿಯ ಮುಜಾಹಿದ್ (36), ಅಬ್ದುಲ್ ಬಾರಿ (45) ಮತ್ತು ಮೆಹಬೂಬ್ ವಲಿ (65) ಎಂದು ಗುರುತಿಸಲಾಗಿದೆ.
ಜಾನುವಾರುಗಳ ಅಕ್ರಮ ಸಾಗಾಟ, ಮಾಂಸಕ್ಕಾಗಿ ಗೋವುಗಳ ಕಟಾವು ಆರೋಪದ ಮೇಲೆ ದಾಳಿ ನಡೆಸಿ ದಂಧೆಯಲ್ಲಿ ಭಾಗಿ ಆಗಿದ್ದವರನ್ನ ಖಾಕಿ ಬಂಧಿಸಿದೆ.
ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನ ಹಳ್ಳಿಯ ಶೆಡ್ ನಲ್ಲಿ ನಡೆದಿದೆ. ಸಣ್ಣ, ಸಣ್ಣ ಕರುಗಳನ್ನು ಕಟಾವು ಮಾಡಿ, ಮಾಂಸಕ್ಕಾಗಿ ಬಳಕೆ ಮಾಡ್ತಿದ್ರು ಅನ್ನೋ ಆರೋಪ ಕೇಳಿಬಂದಿದೆ. ಮಾಹಿತಿ ತಿಳಿದು ಗೋವುಗಳ ಸಾಗಾಟ ಮಾಡಿ, ಕಟಾವು ಮಾಡುತ್ತಿದ್ದವರ ವಿರುದ್ಧ FIR ದಾಖಲಾಗಿದೆ.
ಕೆಲವು ದಿನಗಳಿಂದಲೇ ಅಕ್ರಮ ಗೋ ಸಾಗಾಟ ಮಾಡಿ, ಕಟ್ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದರು. ಪಾಪಿನಾಯಕನ ಹಳ್ಳಿ ಗ್ರಾಮದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
PublicNext
05/05/2026 04:06 pm
LOADING...