ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಪನಹಳ್ಳಿ: ಲಕ್ಷಾಂತರ ಮೌಲ್ಯದ ಬೆಳ್ಳಿ, ಬಂಗಾರ ರಿಕವರಿ- ನಿಟ್ಟುಸಿರು ಬಿಟ್ಟ ಮಾಲೀಕರು

ಹರಪನಹಳ್ಳಿ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ಉಪವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾಲು ಸಮೇತ ಮನೆಗಳ್ಳರನ್ನು ಖಾಕಿ ಬಂಧಿಸಿದೆ.

ಹಡಗಲಿ ತಾಲೂಕಿನ ಕಳಸಮ್ಮನವರ ದುರಗಪ್ಪ, ಹನುಮಕ್ಕನವರ ಗೋಣೆಪ್ಪ, ಹರಪನಹಳ್ಳಿ ತಾಲೂಕಿನ ರವಿ ಸೊನ್ನದ, ಗೊಂದೋಳಿ ಪ್ರವೀಣ, ಕಿಗೊಂದೋಳಿ ಯಮನಪ್ಪ, ಗೊಂದೋಳಿ ರವಿಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಹರಪನಹಳ್ಳಿ- ಹೂವಿನ ಹಡಗಲಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆರಕ್ಕೂ ಅಧಿಕ ಕಳ್ಳತನ ಪ್ರಕರಣ ಪೊಲೀಸರು ಬೇಧಿಸಿದ್ದಾರೆ‌. ಇದರಿಂದ 10 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಹಾಗೂ ಹಣ ಜಪ್ತಿ ಮಾಡಿದ್ದಾರೆ. ಬಂಗಾರ, ಬೆಳ್ಳಿ, ನಗದು ಕಳ್ಳತನ ಮಾಡಿದ್ದನ್ನು ರಿಕವರಿ ಮಾಡಿದ್ದಾರೆ. ಅದರ ಜೊತೆಗೆ ಅಲ್ಯೂಮಿನಿಯಂ ವಿದ್ಯುತ್ ತಂತಿಯನ್ನು ಕೂಡ ಕಳ್ಳರು ಎಗರಿಸಿದ್ದಾರೆ.

ವಿಜಯನಗರ ಜಿಲ್ಲಾ ಎಸ್ಪಿ ಎಸ್. ಜಾಹ್ನವಿ, ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ ಚೌವ್ಹಾಣ್, ಸಿಪಿಐಗಳಾದ ಮಹಾಂತೇಶ್ ಸಜ್ಜನ್, ಹೂಗಾರ್, ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ಮಣಿಕಂಠ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Edited By : Shivu K
PublicNext

PublicNext

22/04/2026 05:33 pm

Cinque Terre

9.6 K

Cinque Terre

0

ಸಂಬಂಧಿತ ಸುದ್ದಿ