ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಶೃಂಗೇರಿ ಕೇಸ್‌ನಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ - ಡಿಸಿಎಂ ಡಿ.ಕೆ ಶಿವಕುಮಾರ್

ಹೊಸಪೇಟೆ : ಶೃಂಗೇರಿಯಲ್ಲಿ ಮತ ಎಣಿಕೆ ಗಲಾಟೆ ವಿಚಾರಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ದೊಡ್ಡ ಪ್ರಮಾಣ ಕ್ರೈಂ ನಡೆದಿದೆ. ಅಧಿಕಾರಿಗಳನ್ನು ಹಿಡಿದು ಟ್ಯಾಂಪರಿಂಗ್ ಆಗಿದೆ. 200ಕ್ಕೂ ಹೆಚ್ಚು ಅಧಿಕಾರಿಗಳ ಮತ ಪತ್ರ ತಿದ್ದಿದ್ದಾರೆ. ಕೌಂಟಿಂಗ್ ಆದಾಗ ಸಹಿ ಮಾಡಿದ್ದರು. ಸಂಚು ಮಾಡಿ ಪೋಸ್ಟಲ್ ಟ್ಯಾಂಪರಿಂಗ್ ಮಾಡೋದು ದೇಶಕ್ಕೆ ಅವಮಾನ ಮಾಡಿದಂತೆ ಅಂತ ಆಕ್ರೋಶ ಹೊರಹಾಕಿದರು.

ನಮ್ಮ ಎಂಎಲ್ಎ ಬಂದಿರುವ ಮತಗಳನ್ನು ತಿದ್ದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಜಯನಗರದಲ್ಲಿಯೂ ಈ ರೀತಿ ಟ್ಯಾಂಪರಿಂಗ್ ಮಾಡಿದ್ದಾರೆ. ಕಾನೂನು ತನಿಖೆ ಮಾಡುತ್ತೇವೆ. ಪ್ರಜಾಪ್ರಭುತ್ವಕ್ಕೆ ಇದು ಅವಮಾನ. ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಧಿಕಾರಿಗಳನ್ನು ಬಳಸಿ ಈ ರೀತಿ ಮಾಡಿರೋದರ ಕುರಿತು ತನಿಖೆ ನಡೆಸಬೇಕು. ಜೊತೆಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Edited By :
PublicNext

PublicNext

03/05/2026 02:30 pm

Cinque Terre

13.84 K

Cinque Terre

3

ಸಂಬಂಧಿತ ಸುದ್ದಿ