ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಹೊಸ ಗೇಟ್, ಚೈನ್ ಅಳವಡಿಕೆಯಿಂದ ಮುಂದಿನ‌ 50 ವರ್ಷ ಡ್ಯಾಂ ಸುಭದ್ರ- ಡಿಸಿಎಂ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯ ಕಾಲುವೆ ಸೇರಿ ವಿವಿಧ ಕಾಮಗಾರಿ ಅಭಿವೃದ್ಧಿಗೆ ಸುಮಾರು 315 ಕೋಟಿ ನಾವು ಹಣ ನೀಡಿದ್ದೇವೆ. ಹೊಸ ಚೈನ್ ಅಳವಡಿಸೋಕೆ ಹೇಳಿದ್ದೇವೆ. ಚೈನ್ ರೆಡಿ ಮಾಡಲು ಟೆಂಡರ್ ನಲ್ಲಿ ಸೇರಿಸಿ ಅಂತ ಹೇಳಿದ್ದೇನೆ. ಮೇ 7ಕ್ಕೆ ಹೊಸ ಚೈನ್ ಬರುತ್ತೆ, ಮೇ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗುತ್ತೆ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ರು.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ಬಳಿ ಮಾತಾಡಿದ ಅವರು, ಮುಂದಿನ‌ ಐವತ್ತು ವರ್ಷ ಆಯಸ್ಸು ಇರುತ್ತೆ ಅಂತ ತಜ್ಞರು ಹೇಳಿದ್ದಾರೆ. ಮುಂದಿನ‌ ದಿನಗಳಲ್ಲಿ ರಾಯಚೂರು, ಕೊಪ್ಪಳ ಬಳ್ಳಾರಿ ವಿಜಯನಗರ ಎಲ್ಲರನ್ನೂ ಕರೆಯಿಸಿ ಊಟ ಹಾಕಿಸುತ್ತೇವೆ. 33 ಟಿಎಂಸಿ ಹೂಳು ತೆಗೆಯೋದು ಸುಲಭದ ಮಾತಲ್ಲ.

ಖಾಸಗಿಯವರಿಗೆ ಹೂಳು ತೆಗೆಯೋರು ಬಂದ್ರೆ ನಾವು ಅದಕ್ಕೆ ರೆಡಿ ಇದ್ದೀವಿ. ಅವರು ಬಂದ್ರೆ ನಾವು ಸಿದ್ಧರಿದ್ದೇವೆ. ಗ್ಲೋಬಲ್ ಟೆಂಡರ್ ಕರೆಯೋ ಯೋಜನೆ ಇದೆ, ನೋಡೋಣ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ರು.

Edited By :
PublicNext

PublicNext

03/05/2026 04:26 pm

Cinque Terre

11.83 K

Cinque Terre

0

ಸಂಬಂಧಿತ ಸುದ್ದಿ