ಹೊಸಪೇಟೆ: ಹೀಗೆ ಬಂದ್ ಆಗಿದ್ದ ಎಸಿ, ಫ್ಯಾನ್ ಶುರು.. ಎಸಿಯಲ್ಲಿ ತಣ್ಣನೇ ಮಲಗಿರೋ ನವಜಾತ ಶಿಶುಗಳು, ಬಾಣಂತಿಯರು, ಪಬ್ಲಿಕ್ ನೆಕ್ಸ್ಟ್ ಕನ್ನಡಕ್ಕೆ ಧನ್ಯವಾದಗಳು ತಿಳಿಸ್ತಿರೋ ಮಹಿಳೆಯರು, ಈ ದೃಶ್ಯಗಳು ಕಂಡು ಬಂದಿದ್ದು ಹೊಸಪೇಟೆಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ..
ಹೌದು. ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿರೋ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು, ಬಾಣಂತಿಯರು ಬೇಸಿಗೆಯ ಶಕೆಗೆ ಬಳಲುತ್ತಿದ್ದರು. ಪಬ್ಲಿಕ್ ನೆಕ್ಸ್ಟ್ ಕನ್ನಡದ ಒಂದೇ, ಒಂದು ವರದಿಯ ಬಳಿಕ ಎಸಿ, ಫ್ಯಾನ್ ಪ್ರಾರಂಭವಾಗಿವೆ.
ಹೊಸಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ತಿಂಗಳಿಗೆ 500 ರಿಂದ 700 ಹೆರಿಗೆ ಮಾಡಿಸಲಾಗುತ್ತದೆ ಅನ್ನೋ ಹೆಮ್ಮೆ ಇದೆ. ಇದೇ ಸರ್ಕಾರಿ ಆಸ್ಪತ್ರೆಗೆ ಹಿಂದಿನ ಆರ್ಥಿಕ ವರ್ಷದಲ್ಲಿ ಹೆರಿಗೆ ವಾರ್ಡ್ ಗೆ ಎಸಿಗಳನ್ನು ಹಾಕಿಸಿ, ಬಡವರ ಮಕ್ಕಳು ಎಸಿಯಲ್ಲಿ ಹುಟ್ಟಬೇಕು ಅಂತ ಅಳವಡಿಕೆ ಮಾಡಲಾಗಿತ್ತು. ಆದ್ರೆ ಎಸಿಗಳು, ಫ್ಯಾನ್ ಗಳು ಕಳೆದ ಮಾರ್ಚ್ ತಿಂಗಳಲ್ಲೇ ಕೆಟ್ಟು ನಿಂತು ಬಿರು ಬಿಸಿಲು ಅದರಿಂದ ಉಂಟಾದ ಶೆಕೆಯಿಂದ ಬಾಣಂತಿಯರು, ನವಜಾತ ಶಿಶುಗಳು ಬಳಲುವಂತಾಗಿತ್ತು. ಇದನ್ನು ಮನಗಂಡ ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿತ್ತು. ನಿನ್ನೇಯಷ್ಟೇ ವರದಿ ಬಿತ್ತರ ಆದ ಬಳಿಕ ಇಂದು ಅಲರ್ಟ್ ಆದ ಡಿಎಚ್ಓ ಡಾ. ಶಂಕರ್ ನಾಯ್ಕ್ ಎಸಿ, ಫ್ಯಾನ್ ಸರಿ ಮಾಡಿಸಿದ್ದಾರೆ.
ಬೈಟ್ : ಡಾ. ಎಲ್. ಆರ್. ಶಂಕರ್ ನಾಯ್ಕ್, ವಿಜಯನಗರ ಡಿಎಚ್ಓ
ನಿನ್ನೆ ಪಬ್ಲಿಕ್ ನೆಕ್ಸ್ಟ್ ಕನ್ನಡದಲ್ಲಿ ವರದಿ ಬಿತ್ತರಿಸುತ್ತಿದ್ದಂತೆಯೇ, ಟೆಕ್ನಿಕಲ್ ಟೀಂ ಬಂದು ಎಸಿಗಳನ್ನು ಸರಿಪಡಿಸಿ, ವೈರ್ ಗಳನ್ನು ಜೋಡಿಸಿ, ಆನ್ ಮಾಡಿ, ಫ್ಯಾನ್ ಗಳು ಸರಿ ಮಾಡಲಾಗಿದೆ. ಸದ್ಯ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ನವಜಾತ ಶಿಶುಗಳು, ಬಾಣಂತಿಯರು ತಣ್ಣನೇ ವಾತಾವರಣದಲ್ಲಿ ಮಲಗುವಂತಾಗಿದೆ. ಇದು ಪಬ್ಲಿಕ್ ನೆಕ್ಸ್ಟ್ ಬಿಗ್, ಬಿಗ್ ಇಂಪ್ಯಾಕ್ಟ್ ಸ್ಟೋರಿ ಆಗಿದೆ.
ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ
PublicNext
03/05/2026 11:47 am
LOADING...