ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಇಂದು ತುಂಗಭದ್ರಾ ಜಲಾಶಯಕ್ಕೆ ಡಿಸಿಎಂ ಡಿಕೆಶಿ ಭೇಟಿ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಇಂದು ಭೇಟಿ ನೀಡಲಿದ್ದಾರೆ. ಜಲಾಶಯಕ್ಕೆ ಅಳವಡಿಸಲಾದ ಹೊಸ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಲಿದ್ದಾರೆ.

ಆ. 10, 2024 ರ ಮಧ್ಯರಾತ್ರಿ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿ ಕಿತ್ತು ಹೋಗಿತ್ತು. ಅದಾದ ಬಳಿಕ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಹರಿಯೋ ನೀರಿನಲ್ಲಿ ಸ್ಟಾಪ್ ಲಾಗ್ ಅಳವಡಿಕೆ ಮಾಡಿದ್ರು. ಬಳಿಕ ಅಧ್ಯಯನ ಮಾಡಿದ ಕನ್ಹಯ್ಯ ನಾಯ್ಡು ಆ್ಯಂಡ್ ಟೀಂ, ಜಲಾಶಯದ ಎಲ್ಲಾ ಗೇಟ್ ಗಳು ತೆರವುಗೊಳಿಸಿ, ಹೊಸ ಗೇಟ್ ಅಳವಡಿಕೆಗೆ ಸೂಚನೆ ನೀಡಿತ್ತು. ಅದಾದ ಬಳಿಕ ನಾರಾಯಣ, ಹಿಂದೂಸ್ತಾನ್, ಜಿಂದಾಲ್ ಕಂಪನಿಗಳು ಗೇಟ್ ರೆಡಿ ಮಾಡಲು ಪ್ರಾರಂಭಿಸಿದ್ದವು.ಕಳೆದ ವರ್ಷ ಡಿಸೆಂಬರ್ 24 ರಿಂದ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಪ್ರಾರಂಭ ಮಾಡಲಾಗಿತ್ತು.

ಅಂದಿನಿಂದ ಇಂದಿನವರೆಗೆ ಗೇಟ್ ಅಳವಡಿಕೆಗೆ ಕಾರ್ಯ ನಡೆಯುತ್ತಿದೆ. ಸದ್ಯ ಹಳೆಯ 33 ಕ್ರಸ್ಟ್ ಗೇಟ್ ತೆಗೆದು, ಹೊಸ ಗೇಟ್ ಅಳವಡಿಕೆಗೆ ಮಾಡಲಾಗಿದೆ. 73 ವರ್ಷದ ಹಳೆಯ ಗೇಟ್ ಗಳು, ಇತಿಹಾಸದ ಪುಟ ಸೇರಿವೆ. ಹೊಸ ಗೇಟ್ ಅಳವಡಿಕೆ ಮಾಡಿದ ಬಳಿಕ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಕೂಡಾ ಕಳೆದ ವಾರವಷ್ಟೇ ವಿಸಿಟ್ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಈಗ ಡಿಸಿಎಂ ಡಿಕೆ. ಶಿವಕುಮಾರ್ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ವೀಕ್ಷಣೆ ಮಾಡಲಿದ್ದು, ಸಚಿವರಾದ ಭೋಸರಾಜು, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ ಸಾಥ್ ನೀಡಲಿದ್ದಾರೆ.

Edited By :
PublicNext

PublicNext

03/05/2026 08:54 am

Cinque Terre

12.83 K

Cinque Terre

0

ಸಂಬಂಧಿತ ಸುದ್ದಿ