ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಸಮಾನಾಂತರ ಜಲಾಶಯ ನೆನಗುದಿಗೆ : ಆಂಧ್ರ ಸಿಎಂ ವಿರುದ್ಧ ಡಿಕೆಶಿ ಅಸಮಾಧಾನ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಟಿಎಂಸಿ ಕಟ್ಟಲೆ ಹೂಳು ತುಂಬುತ್ತಿದೆ. ಇದ್ರಿಂದ 133ಟಿಎಂಸಿ ಕ್ಯಾಪಾಸಿಟಿ ಸಾಮರ್ಥ್ಯದ ಜಲಾಶಯದಲ್ಲೀಗ 105 ಟಿಎಂಸಿ ನೀರು ಶೇಖರಣೆ ಆಗ್ತಿದೆ. ಇದ್ರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗ್ತಿರೋದ್ರಿಂದ ಆ ನೀರನ್ನ ಹಿಡಿದಿಟ್ಟುಕೊಳ್ಳಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಅಂತ ರಾಜ್ಯ ಸರ್ಕಾರ ಎರಡು ಮೂರು ಬಾರಿ ಡಿಪಿಆರ್ ಮಾಡಿದೆ.

ಆದರೆ ಇದಕ್ಕೆ ತೆಲಂಗಾಣ ಸರ್ಕಾರ ಒಪ್ಪಿದ್ರೆ, ಅತ್ತ ಆಂಧ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಮಾತುಕಥೆಗೆ ಸಿಗುತ್ತಿಲ್ಲ. ಇದು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ದೊಡ್ಡ ಹಿನ್ನಡೆ ಆಗ್ತಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ರು.

ಹೊಸಪೇಟೆ ಬಳಿಯ ಟಿಬಿ ಡ್ಯಾಂ ಬಳಿ ಮಾತಾಡಿದ ಅವರು, ರಾಜ್ಯ ಸರ್ಕಾರ ಎರಡು ಬಾರಿ ಡಿಪಿಆರ್ ಮಾಡಿದೆ. ಆದ್ರೆ ಜಲಾಶಯ ನಿರ್ಮಾಣದ ಸಾಧಕ - ಬಾಧಕ ಚರ್ಚೆಗೆ ಪುಣ್ಯಾತ್ಮ ಮುಖ್ಯಮಂತ್ರಿ ಸಿಗುತ್ತಿಲ್ಲ. ಟಿಬಿ ಡ್ಯಾಂನಿಂದ ಪಾಪ ನೀರು ಹೋಗುತ್ತಿದೆಯಲ್ಲ ಅವರಿಗೆ ನೀರಿನ ಬಗ್ಗೆ ಚಿಂತೆ ಮಾಡ್ತಿಲ್ಲ. ಇಲ್ಲಿಂದ ಹೋದ ನೀರನ್ನ ಉಪಯೋಗ ಕೂಡಾ ಮಾಡ್ತಿಲ್ಲ ಬದಲಾಗಿ ಸಮುದ್ರ ಸೇರುತ್ತಿದೆ. ಇದನ್ನ ಹಿಡಿಯಬೇಕು ಮಾತುಕತೆಗೆ ಬನ್ನಿ ಅಂದ್ರೆ ಬರುತ್ತಿಲ್ಲ ಅಂತ ಅಸಮಾಧಾನ ಹೊರಹಾಕಿದ್ರು.

ಅಷ್ಟೇ ಅಲ್ಲದೇ ಜಲಾಶಯದ ಹೂಳು ತೆಗೆಯಲು ಗ್ಲೋಬಲ್ ಟೆಂಡರ್ ಕರೆಯಬೇಕು. ಟಿಬಿ ಡ್ಯಾಂ ನಲ್ಲಿ ತುಂಬಿರೋ ಹೂಳು ತೆಗೆಯಬೇಕು ಅನ್ನೋ ಯೋಚನೆ ಇದೆ. ಚೀನಾದಲ್ಲಿ ಆಧುನಿಕ ಟೆಕ್ನಿಕಲ್ ಬಳಸಿ ಹೂಳು ತೆಗೆಯುತ್ತೇವೆ ಅಂತ ಎರಡು ಬಾರಿ ಬಂದಿದ್ರು. ಟೆಕ್ನಿಕಲ್ ಸಮಸ್ಯೆಯಿಂದ ಹಾಗೆಯೇ ಉಳಿದಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆದು ಹೂಳು ತೆಗೆಯುವ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ್ರು.

Edited By :
Kshetra Samachara

Kshetra Samachara

03/05/2026 04:14 pm

Cinque Terre

860

Cinque Terre

0

ಸಂಬಂಧಿತ ಸುದ್ದಿ