ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ಅಪಘಾತ: ಟ್ರಾಕ್ಟರ್ ಎರಡು ತುಂಡು, ಐವರಿಗೆ ಗಂಭೀರ ಗಾಯ!

ಹೊಸಪೇಟೆ : ಟ್ರಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಟ್ರಾಕ್ಟರ್ ಎರಡು ತುಂಡಾಗಿ ಐವರಿಗೆ ತೀವ್ರ ಗಾಯ ಆಗಿದೆ.

ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ರಾ.ಹೆ. 50 ರಲ್ಲಿ ನಡೆದಿದೆ.ಮಾವಿನಕಾಯಿ ತುಂಬಿದ ಲಾರಿ ಲೋಡ್, ಕೃಷ್ಣಗಿರಿಯಿಂದ ಬೆಂಗಳೂರು ಹೊರಟಿತ್ತು. ಸಂಡೂರು ತಾಲೂಕಿನ ಕಾಳಿಂಗೇರಿಯಿಂದ ಭತ್ತದ ಮೂಟೆ ಹೊತ್ತ ಟ್ರಾಕ್ಟರ್ ಮರಿಯಮ್ಮನ ಹಳ್ಳಿ ರೈಸ್ ಮಿಲ್ ಗೆ ಬರುತ್ತಿತ್ತು. ಲಾರಿ ಚಾಲಕ ಫಯಾಜ್, ಟ್ರಾಕ್ಟರ್ ಚಾಲಕ ಹುಲ್ಲೇಶ, ಅದೇ ಗ್ರಾಮದ ಕೊತ್ಲಪ್ಪ, ಶಿವಪ್ಪ ಮತ್ತು ಬಾಲಕ ಯಶವಂತ್ ಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

04/05/2026 10:12 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ