ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಹೊಸ ಮನೆ ನಿರ್ಮಾಣ ವೇಳೆ ಪಕ್ಕದ ಹಳೆಯ ಮನೆಯ ಗೋಡೆ ಕುಸಿತ - ಮಣ್ಣಿನಡಿ ಸಿಲುಕಿ ಮನೆ ಮಾಲೀಕ ಸಾವು

ಕೂಡ್ಲಿಗಿ : ಮನೆಯ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲಿ ನಡೆದಿದೆ.

ಮನೆಯ ಮಾಲೀಕ ರಂಗನಾಥನಹಳ್ಳಿ ಬಸವರಾಜಪ್ಪ (54) ಮೃತ, ದುರ್ದೈವಿ ಅಂತ ಗುರುತಿಸಲಾಗಿದೆ. ಕಾನಹೊಸಹಳ್ಳಿ ಪಟ್ಟಣದ ಉಜ್ಜಿನಿ ರಸ್ತೆಯಲ್ಲಿ ಹೊಸ ಮನೆಯ ಕಾಮಗಾರಿ ವೇಳೆ ಪಕ್ಕದಲ್ಲಿದ್ದ ಹಳೆಯ ಕಲ್ಲಿನ ಗೋಡೆ ಕುಸಿದಿದ್ದರಿಂದ ಸಾವು ಸಂಭವಿಸಿದೆ.

ಹೊಸಮನೆಯ ಬೇಸ್ಮೇಟ್, ಹಳೆ ಗೋಡೆಯ ನಡುವೆ ಪೈಪ್'ಲೈನ್'ಗೆಂದು ಪಾಯ ತೆಗೆದಿದ್ದರು. ಕೆಲಸಗಾರರು ತೆರಳಿದ ವೇಳೆ ಸಮತಟ್ಟು ಮಾಡಲು ಮೃತ ಬಸವರಾಜ್ ಹೋಗಿದ್ದ. ಈ ವೇಳೆ ಏಕಾಏಕಿ ಗೋಡೆ ಕುಸಿದು ಬಿದ್ದು ಇಡೀ ದೇಹ ಮಣ್ಣಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಪೊಲೀಸರು, ಸ್ಥಳೀಯರು ಒಗ್ಗೂಡಿ ಕಾರ್ಯಾಚರಣೆ ನಡೆಸಿದರು ಪ್ರಯೋಜನ ಆಗದೇ ಸಾವಿಗೀಡಾಗಿದ್ದಾನೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

03/05/2026 12:10 pm

Cinque Terre

10.5 K

Cinque Terre

0