ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ: ಬೈಕ್‌ಗೆ ಲಾರಿ ಡಿಕ್ಕಿ - ಸವಾರ ಸ್ಥಳದಲ್ಲೇ ಸಾವು

ಕೂಡ್ಲಿಗಿ : ಸೂಲದಹಳ್ಳಿ ಗ್ರಾಮಕ್ಕೆ ಹೊರಟಿದ್ದ ವ್ಯಕ್ತಿಯೊಬ್ಬನ ಬೈಕಿಗೆ ಎದುರಿಗೆ ಬಂದ ಲಾರಿಯ ಚಾಲಕನ ಅಜಾಗರೂಕತೆಯಿಂದ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡ್ಲಿಗಿ ಪಟ್ಟಣದ ಹೊರವಲಯದ ಹೊಸಹಳ್ಳಿ ರಸ್ತೆಯ ಫ್ಲೈಓವರ್ ಅಂಡರ್ ಪಾಸ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆದಿದೆ.

ಸೌತೆ ಸೀಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೂಲದಹಳ್ಳಿ ಬಸವರಾಜ್ (35) ಘಟನಾ ಸ್ಥಳದಲ್ಲಿ ತೀವ್ರ ರಕ್ತಗಾಯವಾಗಿ ಮೃತಪಟ್ಟ ದುರ್ದೈವಿ ವ್ಯಕ್ತಿಯಾಗಿದ್ದಾನೆ. ಘಟನೆ ವಿವರ : ಬಸವರಾಜನು ಸೂಲದಹಳ್ಳಿಯಿಂದ ಕೂಡ್ಲಿಗಿ ಪಟ್ಟಣಕ್ಕೆ ಹೋಗಿ ಸಾಮಾನು ತೆಗೆದುಕೊಂಡು ಮೋಟಾರ್ ಸೈಕಲ್‌ನಲ್ಲಿ ಹೈವೇ 50ರ ಮುಖಾಂತರ ಬಂದು ಕೂಡ್ಲಿಗಿ ಪಟ್ಟಣದೊಳಗೆ ಹೋಗುವ ಫ್ಲೈಓವರ್ ಅಂಡರ್ ಪಾಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಹೊಸಹಳ್ಳಿ ಕಡೆಯಿಂದ ಕೂಡ್ಲಿಗಿ ಪಟ್ಟಣದೊಳಗೆ ಹೋಗಲು ಬರುತ್ತಿದ್ದ ಲಾರಿಯ ಚಾಲಕ ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದುರಿಗೆ ಬರುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ್ದರಿಂದ ಬೈಕ್ ಲಾರಿಯೊಳಗೆ ಸಿಕ್ಕಿಹಾಕಿಕೊಂಡು ತಲೆ ಹಾಗೂ ಇತರೆ ಭಾಗಕ್ಕೆ ತೀವ್ರ ರಕ್ತಗಾಯವಾದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ರಾಮಚಂದ್ರ ನೀಡಿದ ದೂರಿನಂತೆ ಲಾರಿ ಚಾಲಕನ ವಿರುದ್ಧ ಕೂಡ್ಲಿಗಿ ಪೊಲೀಸ್ ಠಾಣಾ ಎಎಸ್‌ಐ ಬಸವರಾಜ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

30/04/2026 04:46 pm

Cinque Terre

7.75 K

Cinque Terre

0

ಸಂಬಂಧಿತ ಸುದ್ದಿ