ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ : ಟಿಟಿಗೆ ಲಾರಿ ಡಿಕ್ಕಿ, ಓರ್ವ ಸಾವು, 12 ಮಂದಿಗೆ ಗಾಯ

ಕೂಡ್ಲಿಗಿ : ಟಿಟಿ ವಾಹನಕ್ಕೆ ಹಿಂಬದಿಯಿಂದ ಲಾರಿ ಗುದ್ದಿದ್ದಕ್ಕೆ ಓರ್ವ ಮೃತಪಟ್ಟು 12 ಜನರಿಗೆ ಗಾಯ ಆಗಿದೆ. ಈ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ರಾಹೆ. 50 ರಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಮಧು(27) ಮೃತಪಟ್ಟ ದುರ್ದೈವಿ ಅಂತ ಗುರುತಿಸಲಾಗಿದೆ.

ರಿಲಯನ್ಸ್ ಡಿಜಿಟಲ್ ನಲ್ಲಿ ಮೃತ ಮಧು ಕೆಲಸ ಮಾಡುತ್ತಿದ್ದ. ಮಹಾರಾಷ್ಟ್ರ ಮೂಲದ ಲಾರಿ ಬೆಂಗಳೂರಿನಿಂದ ಕೂಡ್ಲಿಗಿ ಕಡೆ ಹೊರಟಿದ್ದ ಟಿಟಿಗೆ ಡಿಕ್ಕಿ ಹೊಡೆದಿದೆ. ಲಾರಿ ಹೊಡೆದ ರಭಸಕ್ಕೆ ಟಿಟಿಯಲ್ಲಿನ ಜನರಿಗೆ ಗಂಭೀರ ಗಾಯಗಳಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆ ಮತ್ತು ಬಳ್ಳಾರಿ ಟ್ರಾಮಾಕೇರ್ ಸೆಂಟರ್ ಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ಪ್ರಹ್ಲಾದ್ ಚನ್ನಗಿರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
PublicNext

PublicNext

30/04/2026 11:55 am

Cinque Terre

8.14 K

Cinque Terre

0

ಸಂಬಂಧಿತ ಸುದ್ದಿ