ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಮಾತ್ಮನನ್ನು ಮನಸ್ಸಿನ ಮೂಲಕವೇ ಕಾಣಬೇಕು!

ಬೆಂಗಳೂರು : ಕಣ್ಣಿಗೆ ಕಾಣದ ಆ ಭಗವಂತನನ್ನು ಕಾಣಬೇಕೆಂದರೆ, ಅದು ನಮ್ಮ ಮನಸ್ಸಿನ ಮೂಲಕವೇ ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದರು.

ಶೇಷಾದ್ರಿಪುರಂನ ಆರ್.ಕೆ.ಸ್ಟ್ರೀಟ್ ನ ಶಿರೂರು ಪಾರ್ಕ್ ರಸ್ತೆ ಬಳಿ ಇರುವ ಬಲಮುರಿ ಗಣೇಶ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಂಭಾಭಿಷೇಕ ಮಹೋತ್ಸವ ಮತ್ತು ಲೀಲ್ಯಾಕ್ಸ್ ಅಸೋಸಿಯೇಷನ್ ನ 55ನೇ ವರ್ಷದ ಅಣ್ಣಮ್ಮದೇವಿ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ರಾತ್ರಿ ಹೊತ್ತಲ್ಲಿ ಕಾಣುವ ಚಂದ್ರನ ಬೆಳಕೂ ಕೂಡ ಸೂರ್ಯನದೇ ಆಗಿದ್ದು, ದೇವರೂ ಸಹ ಹಾಗೆಯೇ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಗಾಂಧಿನಗರ ಶಾಸಕರು ಆದ ದಿನೇಶ್ ಗುಂಡೂರಾವ್ ಅವರು, ಶೇಷಾದ್ರಿಪುರಂನಲ್ಲಿ ಜನರ ಬೇಡಿಕೆಯಂತೆ ಪಾರ್ಕ್, ಕ್ರೀಡಾಂಗಣ, ದೇವಸ್ಥಾನ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಇಲ್ಲಿನ ಲೀಲಾಕ್ಸ್ ಅಸೋಸಿಯೇಷನ್ ವತಿಯಿಂದ ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಹೋಮ ಹವನ ಕಾರ್ಯದಲ್ಲೂ ಸಚಿವರು ಭಕ್ತಿ ಭಾವದೊಂದಿಗೆ ಭಾಗವಹಿಸಿದ್ದುದು ಗಮನಾರ್ಹವಾಗಿತ್ತು.

ಇನ್ನು, ಬೆಳಗ್ಗೆಯಿಂದಲೇ ಆರಂಭಗೊಂಡ ಅಣ್ಣಮ್ಮದೇವಿ ಮಹೋತ್ಸವಕ್ಕೆಂದು ಆಗಮಿಸಿದ ಸಚಿವರು ಮತ್ತು ಸ್ವಾಮೀಜಿಯವರನ್ನು ಕುಂಭಗಳನ್ನು ಹೊತ್ತ ಸುಮಂಗಲೆಯರು ಮತ್ತು ಸ್ಥಳೀಯರು ಆದರದಿಂದ ಬರಮಾಡಿಕೊಂಡರು.

ಜೊತೆಗೆ ಉಭಯ ಗಣ್ಯರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಒಟ್ಟಿನಲ್ಲಿ ಶೇಷಾದ್ರಿಪುರಂನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾದಂತಿತ್ತು.

Edited By :
PublicNext

PublicNext

30/04/2026 01:51 pm

Cinque Terre

8.03 K

Cinque Terre

0