ಬೆಳಗಾವಿ: ಬೆಳಗಾವಿ ನಗರದಲ್ಲಿ ಹಲವಾರು ವರ್ಷಗಳಿಂದ ಬಸ್ ನಿಲ್ದಾಣವನ್ನೆ ಮನೆ ಮಾಡಿಕೊಂಡಿದ್ದ ವೃದ್ಧನನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಳಗಾವಿಯ ರಾಮತೀರ್ಥ ನಗರದ ಬಸ್ ನಿಲ್ದಾಣದಲ್ಲಿ ಕಳೆದ ಒಂದು ವರ್ಷದಿಂದ ಸರಿಯಾದ ಊಟ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನನ್ನು ಸಮಾಜ ಸೇವಕಿ ಸಂಗೀತಾ ಕಾಂಬಳೆ ಅವರು ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ಬಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿಸುತ್ತಿದ್ದಾರೆ.
ಒಂದು ವರ್ಷದಿಂದ ವೃದ್ಧ ಬಸ್ ನಿಲ್ದಾಣದಲ್ಲೇ ದಿನನಿತ್ಯ ಕಾರ್ಯಗಳು ಮಾಡುತ್ತಿರುವುದರಿಂದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಕಾಲಿಡುತ್ತಿರಲಿಲ್ಲ. ಹಾಗಾಗಿ ಸಂಗೀತಾ ಕಾಂಬಳೆ ಅವರು ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ. ವೃದ್ಧ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ನಿರಾಶ್ರೀತ ಕೇಂದ್ರಕ್ಕೆ ದಾಖಲಿಸುವುದಾಗಿ ಮಾಹಿತಿ ನೀಡಿದ್ದಾರೆ.
PublicNext
30/04/2026 04:16 pm
LOADING...