ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಟ್ರಾಫಿಕ್ ಪೊಲೀಸ್ ತಲೆ ಮೇಲೆ ಫ್ಯಾನ್ ಇರುವ ಕ್ಯಾಪ್ - ಬಿಸಿಲಿನಲ್ಲೂ ಕೂಲ್ ಕೂಲ್

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ರಣ ರಣ ಬಿಸಿಲು ಜನರನ್ನು ಹೈರಾಣಾಗಿಸಿದೆ. ಇದಕ್ಕೆ ಬೆಳಗಾವಿ ಟ್ರಾಫಿಕ್ ಪೊಲೀಸ್ ಒಬ್ಬರು ಒಂದು ಉಪಾಯ ಕಂಡುಕೊಂಡಿದ್ದಾರೆ. ಇದರಿಂದ ಭಯಂಕರ ಬಿಸಿಲಿನ ನಡುವೆಯೂ ಕೂಲ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಶೈಲೇಶ ಸದಲಗಿ ಅವರು "ಸೋಲಾರ್ ಪ್ಯಾನಲ್ ಕ್ಯಾಪ್" ಬಳಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪಿ ಕ್ಯಾಪ್ ಮೇಲೆ ಒಂದು ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಅದರ ಕೆಳಗೆ ಒಂದು ಮೋಟಾರ್ ಕೂಡಿಸಲಾಗಿದೆ. ಇದಕ್ಕೆ ಫ್ಯಾನ್ ಜೋಡಿಸಲಾಗಿದೆ. ಸೋಲಾರ್ ಪ್ಯಾನಲ್‌ನಿಂದ ಮೋಟಾರ್ ಗೆ ವೈರ್ ಸಂಪರ್ಕಿಸಲಾಗಿದೆ. ಪ್ಯಾನಲ್ ಮೇಲೆ ಸೂರ್ಯನ ಕಿರಣಗಳು ಬೀಳುತ್ತಿದ್ದಂತೆ, ಫ್ಯಾನ್ ತಿರುಗುತ್ತದೆ. ಈ ಕ್ಯಾಪ್ ಧರಿಸಿದಾಗ ಕಣ್ಣು, ಹಣೆ ಮತ್ತು ತಲೆ ಮೇಲೆ ಗಾಳಿ ಬಂದು ಆರಾಮ ಎನಿಸುತ್ತದೆ. ನಾನು ಬಿಸಿಲಲ್ಲಿ ಕೆಲಸ ಮಾಡುವುದನ್ನು ನೋಡಿದ ನಮ್ಮ ಒಬ್ಬ ಸ್ನೇಹಿತರು, ನನಗೆ ಇದನ್ನು ತಂದು ಕೊಟ್ಟರು ಕಳೆದ 25 ದಿನಗಳಿಂದ ಈ ಕ್ಯಾಪ್ ನಾನು ಬಳಸುತ್ತಿದ್ದೇನೆ ಎಂದು ಶೈಲೇಶ ಸದಲಗಿ ವಿವರಿಸಿದರು.

ಒಟ್ಟಿನಲ್ಲಿ ಶೈಲೇಶ ಸದಲಗಿ ಬಳಸಿರುವ ಸೋಲಾರ್ ಪ್ಯಾನಲ್ ಕ್ಯಾಪ್ ಬೆಳಗಾವಿ ನಗರದ ಎಲ್ಲಾ ಪೊಲೀಸರಿಗೆ ವಿತರಿಸಿದರೆ ಕೂಲ್ ಆಗಿ ಕೆಲಸ ಮಾಡಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಹ್ಲಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Vinayak Patil
PublicNext

PublicNext

06/05/2026 02:43 pm

Cinque Terre

2.33 K

Cinque Terre

0