ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಧರೆಗುರುಳಿದ ಮರ - ಮಹಿಳೆ ಕ್ಷಣಾರ್ಧದಲ್ಲಿ ಪಾರು

ಪ್ರತಾಪ್‌ಗಢ (ಉತ್ತರ ಪ್ರದೇಶ): ಪ್ರಕೃತಿಯ ವಿಕೋಪದ ಮುಂದೆ ಮನುಷ್ಯ ಅಸಹಾಯಕ ಎಂಬುದು ನಿಜ. ಆದರೆ ಸಾವು ಕಣ್ಣೆದುರೇ ಬಂದಾಗ ತೋರುವ ಧೈರ್ಯ ಅದ್ಭುತವಾಗಿರುತ್ತದೆ. ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಅಂತಹದ್ದೇ ಒಂದು ರೋಮಾಂಚಕ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತನ್ನ ಎಮ್ಮೆಯನ್ನು ಉಳಿಸಿಕೊಳ್ಳಲು ಹೋಗಿ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಜಿಲ್ಲೆಯಲ್ಲಿ ಬೀಸುತ್ತಿದ್ದ ಭೀಕರ ಬಿರುಗಾಳಿಯ ನಡುವೆ, ಮಹಿಳೆಯೊಬ್ಬರು ಮರಕ್ಕೆ ಕಟ್ಟಿದ್ದ ತನ್ನ ಎಮ್ಮೆಯನ್ನು ಬಿಡಿಸಲು ಧಾವಿಸಿದ್ದಾರೆ. ಗಾಳಿಯ ವೇಗ ಹೆಚ್ಚಾದಂತೆ ಬೃಹತ್ ಮರವೊಂದು ಬೇರು ಸಮೇತ ಕಿತ್ತುಬರತೊಡಗಿದೆ. ಮಹಿಳೆ ಎಮ್ಮೆಯ ಹಗ್ಗ ಬಿಡಿಸಿ ಹಿಂದಕ್ಕೆ ಸರಿಯುವಷ್ಟರಲ್ಲೇ ಆ ದೈತ್ಯ ಮರ ಅವರು ನಿಂತಿದ್ದ ದಿಕ್ಕಿಗೇ ಮುರಿದು ಬಿದ್ದಿದೆ.

ಮರ ಬೀಳುತ್ತಿದ್ದಂತೆ ಸುತ್ತಮುತ್ತಲಿದ್ದ ಜನರು ಭಯದಿಂದ ಕಿರುಚಾಡಿದ್ದಾರೆ. ಕ್ಷಣಾರ್ಧದ ವಿಳಂಬವಾಗಿದ್ದರೂ ಮಹಿಳೆ ಮತ್ತು ಮೂಕಪ್ರಾಣಿ ಇಬ್ಬರೂ ಮರದ ಅಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಆದರೆ ಮಹಿಳೆಯ ಸಮಯಪ್ರಜ್ಞೆಯಿಂದಾಗಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ತಕ್ಷಣ ನೆರೆಹೊರೆಯವರು ಓಡಿ ಬಂದು ಅವರಿಗೆ ಸಹಾಯ ಮಾಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮಹಿಳೆಯ ಸಾಹಸಕ್ಕೆ ಶಹಬ್ಬಾಸ್ ಎನ್ನುತ್ತಿದ್ದಾರೆ. "ತನ್ನ ಪ್ರಾಣವನ್ನು ಪಣಕ್ಕಿಟ್ಟು ಮೂಕಪ್ರಾಣಿಯನ್ನು ರಕ್ಷಿಸಿದ ಈ ತಾಯಿಯ ಧೈರ್ಯಕ್ಕೆ ಸಲಾಂ" ಎಂದು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.

Edited By : Nagaraj Tulugeri
PublicNext

PublicNext

30/04/2026 06:37 pm

Cinque Terre

6.41 K

Cinque Terre

0