ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

9 ದಿನಗಳಲ್ಲೇ ಕನ್ಹಾ ಹುಲಿ ಅಭಯಾರಣ್ಯದಲ್ಲಿ ಇಡೀ ಹುಲಿ ಕುಟುಂಬ ಸಾವು

ಭೋಪಾಲ್: ಮಧ್ಯಪ್ರದೇಶದ ಪ್ರತಿಷ್ಠಿತ ಕನ್ಹಾ ಹುಲಿ ಅಭಯಾರಣ್ಯದಲ್ಲಿ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಕೇವಲ ಒಂಬತ್ತು ದಿನಗಳ ಅಂತರದಲ್ಲಿ T-141 ಎಂಬ ಹುಲಿ ಹಾಗೂ ಅದರ ನಾಲ್ಕು ಮರಿಗಳು ಸೇರಿದಂತೆ ಇಡೀ ಐದು ಹುಲಿಗಳ ಕುಟುಂಬವೇ ಸಾವನ್ನಪ್ಪಿದ್ದು, ಇದು ಕೆನೈನ್ ಡಿಸ್ಟೆಂಪರ್ ವೈರಸ್‌ನಿಂದಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಮೃತ ಹುಲಿಗಳಲ್ಲಿ ತೀವ್ರ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ಸೋಂಕು ಕಂಡುಬಂದಿತ್ತು. ಈ ಸಾಮೂಹಿಕ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು, ರಕ್ತ ಮತ್ತು ಅಂಗಾಂಶ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದೆ.

Edited By : Vijay Kumar
PublicNext

PublicNext

01/05/2026 01:53 pm

Cinque Terre

66.13 K

Cinque Terre

0