ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಹಾನಿಗೋಳಗಾದ ರೈತನಿಗೆ ಪರಿಹಾರ ನೀಡಿದ ಸಂತೋಷ ಲಾಡ್

ಕಲಘಟಗಿ : ಕಳೆದ ಒಂದು ವಾರದ ಹಿಂದೆ ಕಲಘಟಗಿ ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ರುದ್ರಯ್ಯ ಗೊಡಿಮನಿ ಎಂಬುವರ ಹೊಲದಲ್ಲಿ ಸಿಡಿಲು ಬಡಿದು ಬೆಂಕಿ ತಗುಲಿ ಅಪಾರವಾದ ಗೋವಿನ ಜೋಳ ಸುಟ್ಟು ಹಾನಿಗೊಳಗಾದ ಸುದ್ದಿಯನ್ನು ನಮ್ಮ ಪಬ್ಲಿಕ್ ನೆಕ್ಸ್ಟ್ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.

ಸುದ್ದಿ ಪ್ರಸಾರವಾದದ್ದನ್ನು ಗಮನಿಸಿದ ಸಂತೋಷ ಲಾಡ್ ಹಾನಿಗೊಳಗಾದ ರೈತನಿಗೆ ತಮ್ಮ ಸಂತೋಷ ಲಾಡ್ ಫೌಂಡೇಶನ್ ಮೂಲಕ ಹಣ ಸಹಾಯ ನೀಡಿದ್ದಾರೆ.

ಇಂದು ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿಗಳಾದ ಸೋಮಶೇಖರ ಬೆನ್ನೂರ್ ಅವರು ಹಾನಿಗೊಳಗಾದ ರೈತನ ಮನೆಗೆ ಭೇಟಿ ನೀಡಿ ಐವತ್ತು ಸಾವಿರ ರೂಪಾಯಿಗಳನ್ನು ರೈತನಿಗೆ ನೀಡಿದರು.

ಸಂತೋಷ್ ಲಾಡ್ ಅವರು ಮಾಡಿರುವ ಈ ಒಂದು ಸಹಾಯಕ್ಕೆ ಕುಟುಂಬಸ್ಥರು ಹಾಗೂ ತುಮರಿಕೊಪ್ಪ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/05/2026 08:12 pm

Cinque Terre

97.39 K

Cinque Terre

0

ಸಂಬಂಧಿತ ಸುದ್ದಿ