ನೋಯ್ಡಾ: ದೆಹಲಿ-ಎನ್‌ಸಿಆರ್ ವ್ಯಾಪ್ತಿಯ ನೋಯ್ಡಾದ ಹೌಸಿಂಗ್ ಸೊಸೈಟಿಯೊಂದರಲ್ಲಿ ಸಾರ್ವಜನಿಕರ ಅಸಭ್ಯ ವರ್ತನೆ ಮಿತಿ ಮೀರಿದೆ. ಸೊಸೈಟಿಯ ಗೇಟ್ ತೆರೆಯಲು ಸ್ವಲ್ಪ ತಡವಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಸೆಕ್ಯೂರಿಟಿ ಗಾರ್ಡ್ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.
ನೋಯ್ಡಾದ ಅಪಾರ್ಟ್‌ಮೆಂಟ್ ಒಂದರ ಪ್ರವೇಶ ದ್ವಾರದ ಬಳಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ, ಕಾರಿನಲ್ಲಿ ಬಂದ ವ್ಯಕ್ತಿ ಹಾರ್ನ್ ಮಾಡಿದಾಗ ಗೇಟ್ ತೆರೆಯಲು ಸೆಕ್ಯೂರಿಟಿ ಗಾರ್ಡ್ ಕೆಲವು ಸೆಕೆಂಡುಗಳ ಕಾಲ ವಿಳಂಬ ಮಾಡಿದ್ದಾರೆ. ಇದರಿಂದ ಕೆರಳಿದ ವ್ಯಕ್ತಿ, ಕಾರಿನಿಂದ ಕೆಳಗಿಳಿದು ಬಂದು ಗಾರ್ಡ್‌ಗೆ ಮನಬಂದಂತೆ ಥಳಿಸಿದ್ದಾರೆ. ಈ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
02/05/2026 04:27 pm
LOADING...