ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ನೇಜಾರು ವಿಶ್ವಕರ್ಮ ಸಂಘದಲ್ಲಿ ಸತ್ಯನಾರಾಯಣ ಪೂಜೆ

ಬ್ರಹ್ಮಾವರ: ಶ್ರೀ ವಿಶ್ವಕರ್ಮ ಸಂಘ ಅಶ್ವತ್ಥಕಟ್ಟೆ ನೇಜಾರು ಕಲ್ಯಾಣಪುರ ಇಲ್ಲಿನ ಸಂಘದ ಶಕುಂತಳಾ ವಾದಿರಾಜ್ ರಾವ್ ಸಭಾ ಭವನ ಒಂದು ವರ್ಷ ಕಳೆದ ಅಂಗವಾಗಿ ಶುಕ್ರವಾರ ಪುರೋಹಿತ್ ಗಣೇಶ್ ಆಚಾರ್ಯ ಇವರ ಪ್ರಧಾನ ಆಚಾರ್ಯತ್ವದಲ್ಲಿ ಸಂಘದ ಅಧ್ಯಕ್ಷ ಉದಯ ಜಿ ಆಚಾರ್ಯ ಮತ್ತು ವಿಮಲ ಆಚಾರ್ಯ ದಂಪತಿಗಳ ಸಂಕಲ್ಪ ಪೂಜೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.

ಇದೇ ಸಂದರ್ಭದಲ್ಲಿ ಸಭಾ ಭವನ ಸಂಪೂರ್ಣ ಹವಾ ನಿಯಂತ್ರಿತಗೊಂಡಿದ್ದು ಸಂಘದ ಸ್ಥಳದಾನಿ ನೇಜಾರು ವಾದಿರಾಜ್ ರಾವ್ ದೀಪ ಬೆಳಗಿ ಉದ್ಘಾಟಿಸಿದರು.

ವಿಶ್ವಕರ್ಮ ಸಂಘದ ಕಾರ್ಯದರ್ಶಿ ಜಗದೀಶ್ ಎಂಪಿ, ಪ್ರಕಾಶ್ ಆಚಾರ್ಯ,ಖಜಾಂಚಿ ಉದಯ ಆಚಾರ್ಯ ನೇಜಾರು, ಕಟ್ಟಡ ಸಮಿತಿಯ ಅಧ್ಯಕ್ಷ ನಾಗೇಶ್ ಆಚಾರ್ಯ ಮಹಿಳಾ ಸಂಘದ ಅಧ್ಯಕ್ಷೆ ಶುಭಲತಾ ಆಚಾರ್ಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಮಂದಿ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ್ದರು.

Edited By : Somashekar
PublicNext

PublicNext

02/05/2026 04:30 pm

Cinque Terre

17.14 K

Cinque Terre

0

ಸಂಬಂಧಿತ ಸುದ್ದಿ