ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೃಹತ್ ಮಹಾನಗರ ಪಾಲಿಕೆ ಮಾಡುವ ನಿರ್ಧಾರ ಸರಿ ಇದೆ ಎಂದ ಸಭಾನಾಯಕ ಅಂಚಟಗೇರಿ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡುವ ಸಂಬಂಧ ಈಗಾಗಲೇ ಸಾಕಷ್ಟು ಹೋರಾಟ ನಡೆದು ಕೊನೆಗೆ ರಾಜ್ಯ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿ ರಾಜ್ಯಪಾಲರ ಸಹಿಗಾಗಿ ಕಳುಹಿಸಿಕೊಟ್ಟಿತ್ತು. ಆದರೆ, ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ. ಇದರ ಮಧ್ಯೆಯೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ. ಈಗ ಇರುವ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯನ್ನೇ ಬೃಹತ್ ಮಹಾನಗರ ಪಾಲಿಕೆ ಮಾಡಲು ಠರಾವು ಪಾಸು ಮಾಡಲಾಗಿದೆ.

ಈ ವಿಚಾರಕ್ಕೆ ಕಾಂಗ್ರೆಸ್ ಸದಸ್ಯರು ಹಾಗೂ ಪ್ರತ್ಯೇಕ ಪಾಲಿಕೆ ಹೋರಾಟಗಾರರು ಒಪ್ಪಿಗೆ ಸೂಚಿಸದೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಪಾಲಿಕೆ ಸಭಾನಾಯಕರಾಗಿರುವ ಈರೇಶ ಅಂಚಟಗೇರಿ ಅವರು ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಸರಿ ಇದೆ. ನಾವು ಹುಬ್ಬಳ್ಳಿ, ಧಾರವಾಡವನ್ನು ಬೃಹತ್ ಮಹಾನಗರ ಪಾಲಿಕೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈರೇಶ ಅಂಚಟಗೇರಿ, ಹುಬ್ಬಳ್ಳಿ, ಧಾರವಾಡ ಒಂದು ಮಾಡಿ ಬೃಹತ್ ಪಾಲಿಕೆ ಮಾಡುತ್ತಿದ್ದೇವೆ. ಕಳೆದ ವರ್ಷ ಕೆಲ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ. ಸರ್ಕಾರ ಅದಕ್ಕೆ ಅನುಮೋದನೆ ಕೊಡಲಿ ಎಂದೇ ಕಳುಹಿಸಿದ್ದೇವೆ. ಎರಡು ಪಾಲಿಕೆಯನ್ನು ಸಮಾನವಾಗಿ ಪ್ರತ್ಯೇಕ ಮಾಡಿ ಎಂದು ಹೇಳಿದ್ದೆವು. ಆದರೆ ಧಾರವಾಡ ಮಹಾನಗರ ಚಿಕ್ಕದು ಹುಬ್ಬಳ್ಳಿ ಮಹಾನಗರ ದೊಡ್ಡದು ಮಾಡಿದ್ದರು.

ಇದರಿಂದ ನಮ್ಮ ಧಾರವಾಡಕ್ಕೆ ಆರ್ಥಿಕ ಹಿನ್ನಡೆ ಕೂಡ ಆಗುತ್ತಿತ್ತು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 10 ರಿಂದ 40 ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಹೆಚ್ಚು ಅಭಿವೃದ್ಧಿ ಮಾಡಲು ಹೊರಟಿದೆ. 16ನೇ ಹಣಕಾಸಿನಲ್ಲಿ ಕೇಂದ್ರ 60 ಸಾವಿರ ಕೋಟಿ ಹಣ ಇಟ್ಟಿದೆ. ಆದರೆ ಹುಬ್ಬಳ್ಳಿ, ಧಾರವಾಡ ಪ್ರತ್ಯೇಕ ಆಗಿದ್ದರೆ ಈ ಯೋಜನೆಯಿಂದ ನಾವು ಹೊರಗೆ ಉಳಿಯುತ್ತಿದ್ದೆವು ಎಂದರು.

ಎರಡು ನಗರ ಪ್ರತ್ಯೇಕ ಆದರೆ 10 ಲಕ್ಷ ಜನಸಂಖ್ಯೆ ಆಗುವುದಿಲ್ಲ. ಕೇಂದ್ರದ ಸಹಾಯ ಧನ ಕೂಡ ನಮಗೆ ಬೇಕು, ಇವತ್ತು ಈ ಯೋಜನೆ ತಪ್ಪಬಾರದು. ರಾಜ್ಯಪಾಲರ ಬಳಿ ಎರಡು ಠರಾವು ಇವೆ, ಅದರಲ್ಲಿ ಗೊಂದಲ ಕೂಡ ಇವೆ. ನಾವು ನಿರ್ಣಯ ತೆಗೆದುಕೊಂಡ ಮೇಲೆ ಶಾಸಕ ಬೆಲ್ಲದ್, ಮಹೇಶ ಟೆಂಗಿನಕಾಯಿ, ಪ್ರದೀಪ್ ಶಟ್ಟರ್ ಕೂಡ ಬೃಹತ್ ಮಹಾನಗರ ಪಾಲಿಕೆ ಆಗಬೇಕು ಎಂದು ಲೆಟರ್ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರ ತರಾತುರಿಯಲ್ಲಿ ಹುಬ್ಬಳ್ಳಿ, ಧಾರವಾಡ ಒಡೆದಿತ್ತು. ಹುಬ್ಬಳ್ಳಿ, ಧಾರವಾಡ ಎರಡು ಪ್ರತ್ಯೇಕ ಮಾಡಿದರೆ ಜನಸಂಖ್ಯೆ ಅನುಪಾತದಲ್ಲಿ ಕೊನೆಯ ಸ್ಥಾನ ಮುಟ್ಟಲಿವೆ.ಹೀಗಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕಡೆಯಿಂದ ಮಾತ್ರ ಪತ್ರ ಕೊಡಿಸಿದ್ದರು. ಭವಿಷ್ಯದಲ್ಲಿ ಹುಬ್ಬಳ್ಳಿ, ಧಾರವಾಡ ಮಹಾನಗರ ಬೆಳೆಯಲೆಂದು ಬೃಹತ್ ಪಾಲಿಕೆ ಮಾಡುತ್ತಿದ್ದೇವೆ ಎಂದರು.

Edited By : Somashekar
Kshetra Samachara

Kshetra Samachara

02/05/2026 05:39 pm

Cinque Terre

10.54 K

Cinque Terre

0

ಸಂಬಂಧಿತ ಸುದ್ದಿ