ಹುಬ್ಬಳ್ಳಿ: ಅಯ್ಯೋ ದೇವರೆ ನಮ್ ಹುಬ್ಬಳ್ಳಿ ಯಾವಾಗ ಅಭಿವೃದ್ಧಿ ಆಗ್ತೈತಿ ಅಂತ ಜನ ನೋಡ್ಕೋತ ಕುಂತಾರ... ಆದರೆ ಈ ಜನ ನಾಯಕರು, ಅಧಿಕಾರಿಗಳು ಸುಳ್ಳು ಸುಳ್ಳು ಭರವಸೆ ಕೊಟ್ಟು, ಜನರ ಜೀವನದ ಜೊತೆ ಚೆಲ್ಲಾಟ ಆಡಾಕತ್ತಾರ.... ಎಲ್ಲೆ ನೋಡಿದ್ರಲ್ಲಿ ಧೂಳು... ಧೂಳು.... ಎತ್ತನೋಡಿದ್ರತ್ತ ಧೂಳು... ಈ ಧೂಳಿಗೆ ನಮ್ ಜನ ಬೇಸರ ಆಗಿದ್ದಲ್ಲದೆ,,, ಅಸ್ತಮಾದಂತಹ ರೋಗಕ್ಕೆ ತುತ್ತಾಗ್ತಿದ್ದಾರ.. ಹುಬ್ಬಳ್ಳಿನ ಧೂಳು ಮುಕ್ತ ಮಾಡಾಕ ಆಗುತ್ತಿಲ್ಲ ಇವರಿಗೆ.. ಚೆನ್ನಮ್ಮ ಸರ್ಕಲ್ ಹೆಂಗ್ ಆಗೈತಿ ನೀವು ಒಂದು ಸಾರಿ ನೋಡ್ರಿ ಪಾ.....
ನೋಡಿದ್ರಲ್ಲ ಹೆಂಗಿದ್ದ ನಮ್ ಹುಬ್ಬಳ್ಳಿ ಹೆಂಗೋ ಆಗೈತಿ.. ಹುಬ್ಬಳ್ಳಿಯ ಹೃದಯ ಭಾಗ ಅಂತ ಕರಿಸಿಕೊಳ್ಳೊ ಚೆನ್ನಮ್ಮ ಸರ್ಕಲ್ ಸುತ್ತ ಫ್ಲೈ ಓವರ್ ಕಾಮಗಾರಿ ಮಾಡಾಕತ್ತಾರಾ.. ಇದು ಇಡೀ ಹುಬ್ಬಳ್ಳಿಯನ್ನ ಧೂಳಿನ್ಯಾಗ ಮುಳಗ್ಸೆತಿ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಧೂಳಿನ ಸಮಸ್ಯೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ದಾಗ ನಿರಂತರ ಸುದ್ದಿ ಮಾಡುತ್ತಾ ಬಂದೇವಿ. ಆದರೆ ಇಲ್ಲೂವರೆಗೂ ಧೂಳು ಮುಕ್ತ ಮಾಡಲು ಆಗುತ್ತಿಲ್ಲ. ಚೆನ್ನಮ್ಮ ಸರ್ಕಲ್, ಹಳೇ ಕೋರ್ಟ್ ಸರ್ಕಲ್, ಕಾರ್ಪೊರೇಷನ್ ರೋಡ್ ನೋಡಿದ್ರ ಅಪ್ಪಾ ದೇವರೆ ಧೂಳಿನಿಂದ ಕಂಗೋಳಸಾಕತೈತಿ ನೋಡ್ರಿ... ಕೊರೊನಾ ಹೋದ್ರು ಹುಬ್ಬಳ್ಳಿದಾಗ ಮಾಸ್ಕ್ ತಪ್ಪುತ್ತಿಲ್ಲಾ... ಜನ ಹಿಡಿಶಾಪ ಹಾಕಾಕತ್ತಾರ ನೋಡ್ರಿ...
ಚೆನ್ನಮ್ಮ ಸರ್ಕಲ್ ಹಾರ್ಟ್ ಆಫ್ ಸಿಟಿ ಅಂತಾರ.. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಜನ ಬರ್ತಾರ ಹುಬ್ಬಳ್ಳಿ ಪರಿಸ್ಥಿತಿ ನೋಡಿ ಕ್ಯಾಕರಿ ಉಗಳಿ ಹೊಂಟಾರ... ಯಾವಾಗ ಹುಬ್ಬಳ್ಳಿ ಅಭಿವೃದ್ಧಿ ಆಗ್ತದೋ,,, ನಾವು ಯಾವಾಗ ಆರಾಮಾಗಿ ಓಡಾಡ್ತೆವೋ ದೇವರೇ ಬಲ್ಲ....
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
06/05/2026 04:43 pm
LOADING...