ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರತ್ಯೇಕ ಪಾಲಿಕೆಯೋ..? BHDMCಯೋ..? - ಜನರಲ್ಲಿ ಸೃಷ್ಟಿಯಾದ ಗೊಂದಲ!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ. ಈ ಪಾಲಿಕೆಯನ್ನು ಹುಬ್ಬಳ್ಳಿಗೆ ಹಾಗೂ ಧಾರವಾಡಕ್ಕೆ ಪ್ರತ್ಯೇಕವಾಗಿ ಮಾಡಲು ಅದೆಷ್ಟೋ ಹೋರಾಟಗಳು ನಡೆದವು. ಆದರೆ ಈಗ ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿ ಪಟ್ಟು ಹಿಡಿದಿದ್ದು, ಸಾರ್ವಜನಿಕರಿಗೆ ಪ್ರತ್ಯೇಕ ಪಾಲಿಕೆಯೋ ಅಥವಾ ಬೃಹತ್ ಮಹಾನಗರ ಪಾಲಿಕೆಯೋ ಎಂಬುವಂತಹ ಗೊಂದಲ ಸೃಷ್ಟಿಯಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಭವಿಷ್ಯದ ಕುರಿತು ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಒಂದು ಕಾಲದಲ್ಲಿ ಪಾಲಿಕೆ ವಿಭಜನೆಗೆ ಪಟ್ಟು ಹಿಡಿದಿದ್ದ ಬಿಜೆಪಿಯು ಈಗ ಬೃಹತ್ ಮಹಾನಗರ ಪಾಲಿಕೆ ರಚನೆಗೆ ಒತ್ತಾಯಿಸುತ್ತಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಮಾತ್ರ ವಿಭಜನೆಯ ನಿರ್ಧಾರಕ್ಕೇ ಅಂಟಿಕೊಂಡಿದೆ.

1962ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರಸಭೆಗಳನ್ನು ವಿಲೀನಗೊಳಿಸಿ ಮಹಾನಗರ ಪಾಲಿಕೆಯನ್ನು ರಚಿಸಲಾಗಿತ್ತು. ಪ್ರಸ್ತುತ ಇದು 202.3 ಚದರ ಕಿ.ಮೀ ವ್ಯಾಪ್ತಿ ಹಾಗೂ 82 ವಾರ್ಡ್‌ಗಳನ್ನು ಹೊಂದಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಧಾರವಾಡಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಹೀಗಾಗಿ, ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಪ್ರತ್ಯೇಕ ಧಾರವಾಡ ಪಾಲಿಕೆಗೆ ಆಗ್ರಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ 2025ರ ಜನವರಿಯಲ್ಲಿ ವಿಭಜನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ ಏಕಾಏಕಿ ಬದಲಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಕೇಂದ್ರದ ಬೃಹತ್ ಅನುದಾನ ಕೈತಪ್ಪಲಿದೆ ಎಂಬುದು ಬಿಜೆಪಿಯ ಆತಂಕವನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಪಾಲಿಕೆ ಹಾಗೂ ಬೃಹತ್ ಪಾಲಿಕೆಯ ರಚನೆಯಲ್ಲಿ ಸ್ಪಷ್ಟತೆಯೇ ಇಲ್ಲದೇ ಜನರಲ್ಲಿ ಗೊಂದಲ ಹುಟ್ಟುವಂತೆ ಮಾಡಲಾಗುತ್ತಿದೆ.

ಅಲ್ಲದೇ ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ವಿಭಜನೆ ಕೈಬಿಟ್ಟು ಬೃಹತ್ ಪಾಲಿಕೆ ರಚಿಸಲು ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸೂಕ್ತ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕು. ಬೇಕಾಬಿಟ್ಟಿ ನಿರ್ಧಾರದಿಂದ ಜನರು ಪಾಲಿಕೆಯ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಈ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೈಟ್: ಎಂ.ಎಂ.ಭದ್ರಾಪುರ (ಪಾಲಿಕೆ ಸದಸ್ಯರು)

ಒಟ್ಟಿನಲ್ಲಿ ಪಾಲಿಕೆಯ ಬಗ್ಗೆ ಇಂತಹದೊಂದು ಚರ್ಚೆ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಿದೆ. ಇನ್ನಾದರೂ ಅವಳಿನಗರಕ್ಕೆ ಯಾವುದು ಸೂಕ್ತ, ಅಭಿವೃದ್ಧಿಗೆ ಯಾವುದು ಪೂರಕ ಎಂಬುವುದನ್ನು ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/05/2026 08:07 pm

Cinque Terre

16.19 K

Cinque Terre

0

ಸಂಬಂಧಿತ ಸುದ್ದಿ