ಹುಬ್ಬಳ್ಳಿ: ಪಕ್ಕದ ಮನೆಯ ನಿವಾಸಿಯನ್ನು ಗುರಾಯಿಸಿ ನೋಡಿದ್ದಕ್ಕೆ ಕೋಪಿತಗೊಂಡ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು,,, ಹುಬ್ಬಳ್ಳಿ ಎಸ್.ಎಮ್ ಕೃಷ್ಣನಗರದಲ್ಲಿ ಸಲ್ಮಾನ್ ಖಾನ್ ಎಂಬಾತ ಯುವಕನೇ ಚಾಕು ಇರಿತಕ್ಕೆ ಒಳಗಾಗಿ ಕೊಲೆಯಾಗಿದ್ದಾನೆ. ಸಲ್ಮಾನ್ ಮತ್ತು ಕೊಲೆ ಮಾಡಿದ ಆರೋಪಿ ಸಿಕಂದರ್ ಈ ಇಬ್ಬರು ಅಕ್ಕಪಕ್ಕದ ಮನೆಯವರು, ಕ್ಷುಲ್ಲಕ ವಿಚಾರಕ್ಕೆ ಈ ಇಬ್ಬರ ನಡುವೆ ಜಗಳವಾಗಿತ್ತು. ಅದೇ ದ್ವೇಷವನ್ನಿಟ್ಟುಕೊಂಡಿದ್ದ ಈ ಇಬ್ಬರೂ, ನಿನ್ನೆ ದಿನದಂದು ಒಬ್ಬರಿಗೊಬ್ಬರು ಗುರಾಯಿಸುತ್ತಾ ನೋಡ್ತಾ ನಿಂತಿದ್ದರು. ಇದಕ್ಕೆ ಕುಪಿತಗೊಂಡ ಆರೋಪಿ ಸಿಕಂದರ್, ಸಲ್ಮಾನ್ ಖಾನ್ ಮನೆಗೆ ಹೋಗಿ ಅವಾಚ್ಯ ಶಬ್ಧದಿಂದ ನಿಂದಿಸಿದ್ದಲ್ಲದೇ ಹೊರಗೆ ಕರೆದು ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಆಸ್ಪತ್ರೆಗೆ ರವಾನಿಸಿದ ಕುಟುಂಬಸ್ಥರು, ಆದ್ರೆ ಸಲ್ಮಾನ್ ಖಾನ್ ಇಂದು ಸಾವನ್ನಪ್ಪಿದ್ದಾನೆ. ಈ ಕುರಿತು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಸಿಕಂದರ್‌ನನ್ನು ಅರೆಸ್ಟ್ ಮಾಡಿದ್ದಾರೆ.
ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/05/2026 04:38 pm
LOADING...