ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಆ್ಯಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿನಕಟ್ಟೆಯಿಂದ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆಯೇ ಬಾಣಂತಿ ಒಬ್ಬರು ಆ್ಯಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ.

ಹಂಪಿನಕಟ್ಟೆ ಗ್ರಾಮದಿಂದ ಹೊಸಪೇಟೆ ತೆರಳುವ ವೇಳೆ ಮಾರ್ಗಮಧ್ಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ

ಆ್ಯಂಬುಲೆನ್ಸ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಶಕೀಲಾ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಮೊದಲು 4 ಗಂಟೆಗೆ ಒಂದು ಮತ್ತೊಂದು 4:20 ಸಮಯಕ್ಕೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾಳೆ. ತುರ್ತು ಆರೋಗ್ಯ ತಜ್ಞ ಅನಿಲ್ ಕುಮಾರ್ ಜೆ ಎಚ್ಚರಿಕೆಯಿಂದ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಆಶಾ ವರ್ಕರ್ ಗಂಗಮ್ಮ, ವಾಹನ ಚಾಲಕ ಭಾಷಾ ಇದ್ದರು.

Edited By : Nagaraj Tulugeri
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/05/2026 05:04 pm

Cinque Terre

5.1 K

Cinque Terre

0

ಸಂಬಂಧಿತ ಸುದ್ದಿ