ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬೇಕಾಬಿಟ್ಟಿ ಹೊಗೆ ಬಿಡುವ ಬಸ್ಸಿಗಿಲ್ಲ ಕಡಿವಾಣ - ಸಾರಿಗೆ ಸಂಸ್ಥೆ ಅಂಧ ದರ್ಬಾರ್

ಹುಬ್ಬಳ್ಳಿ : ಅವಳಿನಗರದಲ್ಲಿ ಬೇಕಾಬಿಟ್ಟಿ ಹೊಗೆ ಬಿಡುವ ವಾಹನಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಅದರಲ್ಲೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಯಾವುದೇ ನಿಯಮ ಅನ್ವಯಿಸುವುದೇ ಇಲ್ಲ ನೋಡ್ರಿ..

ಈಗಾಗಲೇ ತಾಪಮಾನ 39-40° ದಾಟಿದೆ. ಜನರು ಬಿಸಿಲಿನ ತಾಪಮಾನ ಹಾಗೂ ವಾಯುಮಾಲಿನ್ಯದಿಂದ ಹೈರಾಣಾಗುತ್ತಿದ್ದಾರೆ. ಇದರ ಮಧ್ಯದಲ್ಲಿಯೇ ಬೇಕಾಬಿಟ್ಟಿಯಾಗಿ ಹೊಗೆ ಸೂಸುವ ವಾಹನಗಳು ರಸ್ತೆಯಲ್ಲಿ ಓಡಾಡುವ ಮೂಲಕ ಅವ್ಯವಸ್ಥೆ ಸೃಷ್ಟಿಸುತ್ತಿವೆ.

ಇನ್ನೂ ಎಮಿಷನ್ ಟೆಸ್ಟ್ ಪ್ರತಿಯೊಂದು ವಾಹನಕ್ಕೂ ನಿಗದಿ ಪಡಿಸಲಾಗಿದೆ. ಆದರೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಆಡಿದ್ದೇ ಆಟ, ನಡೆದಿದ್ದೇ ದಾರಿ ಎಂಬುವಂತಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/05/2026 02:24 pm

Cinque Terre

157.18 K

Cinque Terre

2

ಸಂಬಂಧಿತ ಸುದ್ದಿ